ಭಾರತದಲ್ಲಿ ಕೊರೋನಾ ಲಸಿಕೆ ಪ್ರಯೋಗದ ಮೊದಲ ಹಂತ ಯಶಸ್ವಿಯಾಗಿದೆ. ಲಸಿಕೆಯಿಂದ ಯಾವುದೇ ವ್ಯತಿರಿಕ್ತ ಪರಿಣಾಮ ಆಗಿಲ್ಲ.
ಭಾರತ್ ಬಯೋಟೆಕ್ ನ ಕೋವಿಡ್ ಲಸಿಕೆ ಪ್ರಯೋಗ ಮಾನವನ ಮೇಲೆ ಆರಂಭವಾಗಿದೆ ಎಂದು ಹರ್ಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಮಾಹಿತಿ ನೀಡಿದ್ದಾರೆ. ಪಿಜಿಐ ರೋಹ್ಟಕ್ ನಲ್ಲಿ ಮನುಷ್ಯರ ಮೇಲೆ ಲಸಿಕೆ ಪ್ರಯೋಗ ಆರಂಭವಾಗಿದ್ದು ಲಸಿಕೆಯಿಂದ ಯಾವುದೇ ವ್ಯತಿರಿಕ್ತ ಪರಿಣಾಮವಾಗಿಲ್ಲ ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತ್ ಬಯೋಟೆಕ್ ಕಂಪನಿಗೆ ಕೊವ್ಯಾಕ್ಸಿನ್ ಕೋವಿಡ್ ಲಸಿಕೆ ಮಾನವ ಕ್ಲಿನಕಲ್ ಪ್ರಯೋಗಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ. ದೇಶದ 12 ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಂಡು ಲಸಿಕೆ ನೀಡಲಾಗುತ್ತಿದೆ. ಬೆಳಗಾವಿ, ಪಾಟ್ನಾ, ದೆಹಲಿ ಸೇರಿ ಹಲವು ಆಸ್ಪತ್ರೆಗಳಲ್ಲಿ ಸೋಂಕಿತರ ಮೇಲೆ ಲಸಿಕೆ ಪ್ರಯೋಗ ನಡೆಸಲಾಗಿದೆ. ಪಿಜಿಐ ರೋಹ್ಟಕ್ ನಲ್ಲಿ ಲಸಿಕೆ ಪ್ರಯೋಗದ ಮೊದಲ ಹಂತ ಯಶಸ್ವಿಯಾಗಿದೆ. ಮೂರು ಹಂತದಲ್ಲಿ ಪ್ರಯೋಗದ ನಂತರ ಒಪ್ಪಿಗೆ ಸಿಗಲಿದೆ.