alex Certify ಮರಿ ಬಳಿ ಸಿಂಹ ಹೇಳಿದ್ದೇನು ಎಂಬುದೇ ಎಲ್ಲರ ಕುತೂಹಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಿ ಬಳಿ ಸಿಂಹ ಹೇಳಿದ್ದೇನು ಎಂಬುದೇ ಎಲ್ಲರ ಕುತೂಹಲ

ಐಎಫ್ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿರುವ ಫೋಟೋವೊಂದು ಹಲವರು ತಲೆ ಕೆರೆದುಕೊಳ್ಳುವಂತೆ ಮಾಡಿದೆ.

ಫೋಟೋದಲ್ಲಿ ಸಿಂಹವೊಂದು ತನ್ನ ಮರಿಯ ಬಗ್ಗೆ ಪ್ರೀತಿ ತೋರುತ್ತಿದೆ. ತನ್ನ ಮರಿಯ ಬೆನ್ನಿನ ಮೇಲೆ ಕಾಲನ್ನಿಟ್ಟು ಏನೋ ಹೇಳುತ್ತಿರುವಂತೆ ಭಾಸವಾಗುತ್ತದೆ. ಏಷ್ಯಾಟಿಕ್ ಸಿಂಹಗಳ ತಾಣವಾದ ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ಕ್ಲಿಕ್ಕಿಸಿದ ಅಪರೂಪದ ಫೋಟೋ ಇದಾಗಿದೆ.

“ತಾಯಿ ಸಿಂಹವು ತನ್ನ ಮರಿಗೆ ಏನು ಹೇಳುತ್ತಿದೆ ಗೆಸ್ ಮಾಡಿ” ಎಂದು ಪರ್ವೀನ್ ಕಾಸ್ವಾನ್ ತಮ್ಮ ಟ್ವಿಟರ್ ಫಾಲೋವರ್ಸ್ ಬಳಿ ಕೇಳಿದ್ದಾರೆ. ಆಗಸ್ಟ್ 10ರ ವಿಶ್ವ ಸಿಂಹ ದಿನಾಚರಣೆ ಹಿನ್ನೆಲೆಯಲ್ಲಿ ಕಾಸ್ವಾನ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಸಿಂಹ ತನ್ನ ಮರಿಗೆ ಏನು ಹೇಳುತ್ತಿರಬಹುದು ಎಂದು ಹಲವರು ಕಮೆಂಟ್ ಮಾಡಿದ್ದಾರೆ. “ಮಗು ಮುಂದಿನ ದಿನಗಳ ಬಗ್ಗೆ ಯೋಚಿಸಿದ್ದೀಯಾ..?” ಎಂದು ಸಿಂಹ ಹೇಳುತ್ತಿದೆ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು “ಮಗು ಬೇಗ ದೊಡ್ಡವನಾಗು” ಎಂದು ತಾಯಿ ಹೇಳುತ್ತಿದೆ ಎಂದು ಬರೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...