ಪ್ರಕೃತಿಯೊಂದಿಗೆ ಸಮಯ ಕಳೆಯುವುದು ನಿಮಗೆ ಬದುಕಿನ ಒಳ್ಳೆಯ ಅರಿವನ್ನು ಮೂಡಿಸುತ್ತದೆ. ಒಂದು ವರ್ಷದ ಪೋರನೊಬ್ಬ ಪ್ರಕೃತಿಯೊಂದಿಗೆ ಬದುಕುವುದನ್ನು ಕಲಿಯುತ್ತಿರುವ ಫೋಟೋಗಳು ಸದ್ದು ಮಾಡುತ್ತಿವೆ.
“ನನ್ನ ಒಂದು ವರ್ಷದ ಮಗ, ಗುಬ್ಬಚ್ಚಿಗಳ ಗುಂಪಿಗೆ ಕಾಳುಗಳನ್ನು ಹಾಕುತ್ತಿದ್ದಾನೆ. ಇದೇ ಕುತೂಹಲ ಸಾಕಷ್ಟು ದಿನಗಳ ಕಾಲ ಉಳಿಯಲಿದೆ ಎಂದು ಭಾವಿಸುವೆ. ಕನಿಷ್ಠ 20 ಗುಬ್ಬಚ್ಚಿಗಳು ಹಾಗೂ 2 ಬಾತುಕೋಳಿಗಳು ಭೇಟಿ ಕೊಟ್ಟಿದ್ದವು” ಎಂದು ಟ್ವಿಟರ್ ಬಳಕೆದಾರ ಸಂಜೀಬ್ ಹಂಚಿಕೊಂಡಿದ್ದರು.
ಮರಗಳು ಹಾಗೂ ಪಾಟ್ ಗಳಲ್ಲಿ ಬೆಳೆದ ಗಿಡಗಳ ನಡುವೆ ಕುಳಿತುಕೊಂಡಿರುವ ಈ ಪುಟ್ಟಣ್ಣ ಬ್ಯಾಗೊಂದರಿಂದ ಕಾಳುಗಳನ್ನು ಹೆಕ್ಕುತ್ತಿರುವುದನ್ನು ಕಾಣಬಹುದಾಗಿದೆ.