100 ನೇ ವರ್ಷದ ಜನ್ಮದಿನಾಚರಣೆಗೆ ಇನ್ನೇನು ಕೆಲವೇ ದಿನ ಬಾಕಿ ಅನ್ನೋವಷ್ಟರಲ್ಲಿ ಬಬಿತಾರಾಣಿ ಸಮಂತಾ ಎಂಬ ವೃದ್ಧೆ ಕೊರೊನಾ ವಿರುದ್ಧ ಹೋರಾಡಬೇಕಾಗಿ ಬಂದಿತ್ತು. ಆದರೆ 100ರ ಅಜ್ಜಿ ಡೆಡ್ಲಿ ವೈರಸ್ನ್ನ ಬಗ್ಗು ಬಡಿದು ಸೋಂಕು ಮುಕ್ತರಾಗಿದ್ದಾರೆ.
99 ವರ್ಷ 11 ತಿಂಗಳು ಪ್ರಾಯದಲ್ಲಿದ್ದಾಗ ಬಬಿತಾ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಹೀಗಾಗಿ ಅವರನ್ನ ನವೆಂಬರ್ 24ರಂದು ಪಶ್ಚಿಮ ಬಂಗಾಳದ ಫೂಲೇಶ್ವರದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೃದ್ಧೆ ಬಬಿತಾ ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.
ಸುಭಾಸಿಸ್ ಮಿತ್ರ ನೇತೃತ್ವದ ವೈದ್ಯರ ತಂಡ ವೃದ್ಧೆ ಸೂಕ್ತ ಚಿಕಿತ್ಸೆಯನ್ನ ನೀಡಿದೆ. ಸರಿಯಾದ ಕಾಳಜಿಯಿಂದಾಗಿ ಬಬಿತಾ ಆರೋಗ್ಯ ಸುಧಾರಿಸಲು ಆರಂಭಿಸಿತು. ಆಕೆಯ 100ನೇ ವರ್ಷದ ಬರ್ತಡೇಯೊಳಗಾಗಿ ಆಕೆಯನ್ನ ಡಿಸ್ಚಾರ್ಜ್ ಮಾಡುವ ಗುರಿ ಹೊಂದಿದ್ದೆವು. ಅದೇ ರೀತಿ ಆಕೆಯನ್ನ ಕಳಿಸಿಕೊಟ್ಟಿದ್ದೇವೆ ಅಂತಾ ಆಸ್ಪತ್ರೆ ನಿರ್ದೇಶಕ ಸುಭಾಸಿಸ್ ಮಿತ್ರ ಹೇಳಿದ್ದಾರೆ.