ಈ ಕೊರೋನಾ ಕಾಲದಲ್ಲಿ ಮುಖಕ್ಕೆ ಮಾಸ್ಕ್ ಇಲ್ಲದೆ ಮನೆಯಿಂದ ಹೊರಗೆ ಕಾಲಿಡುವುದೂ ಕಷ್ಟವಾಗಿದೆ.
ಆದರೂ ಅನೇಕರು ಈ ಬಗ್ಗೆ ಜಾಗೃತರಾಗಿಲ್ಲ. ಅಂತಹುದರಲ್ಲಿ ಬಂಗಾಳದ ಈತ ಏನು ಮಾಡಿದ್ದಾನೆ ಗೊತ್ತೆ ?
ಮಾಸ್ಕ್ ನ ಮೇಲ್ಭಾಗದ ಸುತ್ತ ನೀಲಿ ಬಣ್ಣದ ಎಲ್ಇಡಿ ಬಲ್ಬ್ ಗಳನ್ನು ಸಾಲಾಗಿ ಅಳವಡಿಸಿದ್ದಾನೆ.
ಇವನ ಹೆಸರು ಗೌರ್ ನಾಥ್. ಕಂಚ್ರಾಪರ ಎಂಬ ಹಳ್ಳಿಯವ. ಎಲ್ಇಡಿ ಬಳಸಿದ ಈ ಮಾಸ್ಕ್ ಅತ್ಯಂತ ಸುರಕ್ಷತೆಯ ಕ್ರಮ ಎನ್ನುತ್ತಾರೆ ಈತ. ಅದು ಹೇಗೆ ? ಮುಂದೆ ಓದಿ.
ಜನರ ನಡುವೆ ಓಡಾಡುವಾಗ ಮಾಸ್ಕ್ ಧರಿಸಿದವರೂ ಇರುತ್ತಾರೆ, ಇಲ್ಲದವರೂ ಇರುತ್ತಾರೆ. ಒತ್ತಡದ ಮಧ್ಯೆ ಇದನ್ನು ಗಮನಿಸಲು ಸಾಧ್ಯವಾಗದೇ ಇರಬಹುದು. ಹೀಗಾಗಿ ಎಲ್ಇಡಿ ಇರುವ ಮಾಸ್ಕ್ ಇದ್ದರೆ, ಗುರುತಿಸುವುದು ಸುಲಭವಾಗಲಿದೆ. ಎಲ್ಲಕ್ಕಿಂತ ಮಿಗಿಲಾಗಿ ಇದು ಮಾಸ್ಕ್ ಧಾರಣೆಯ ಬಗ್ಗೆ ಜನಜಾಗೃತಿ ಮೂಡಿಸುವ ನನ್ನದೇ ಆದ ಸಣ್ಣ ಉಪಾಯ ಎನ್ನುತ್ತಾರೆ.
https://www.facebook.com/bivasd/videos/4068320249907232/?t=11