ಕೊಕೇನ್ ಕೊಂಡೊಯ್ಯುತ್ತಿದ್ದ ಆಪಾದನೆ ಮೇಲೆ ಪಶ್ಚಿಮ ಬಂಗಾಳ ಬಿಜೆಪಿ ಯುವ ಮೋರ್ಚಾದ ಮಹಾಕಾರ್ಯದರ್ಶಿ ಪಮೇಲಾ ಗೋಸ್ವಾಮಿರನ್ನು ಪೊಲೀಸರು ಬಂಧಿಸಿದ್ದಾರೆ.
ಲಕ್ಷಾಂತರ ರೂಪಾಯಿ ಬೆಲೆ ಬಾಳುವ 100 ಗ್ರಾಂನಷ್ಟು ಕೊಕೇನ್ ಅನ್ನು ಪಮೇಲಾ ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದರು ಎಂಬ ಆಪಾದನೆ ಇದೆ. ಇದೇ ವೇಳೆ ಅವರ ಕಾರಿನಲ್ಲಿ ಇದ್ದ ಪಮೇಲಾ ಸ್ನೇಹಿತ ಪ್ರಬೀರ್ ಕುಮಾರ್‌ರನ್ನು ಸಹ ಬಂಧಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಎದುರಾಯ್ತು ಸಂಕಷ್ಟ
ಸ್ಥಳೀಯ ನ್ಯಾಯಾಲಯವೊಂದರಲ್ಲಿ ವಿಚಾರಣೆ ನಡೆಯುವ ವೇಳೆ; ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ನಿಕಟವರ್ತಿ ರಾಕೇಶ್ ಸಿಂಗ್ ಸಹ ಡ್ರಗ್ಸ್ ಕೇಸ್‌ನಲ್ಲಿ ಇದ್ದು, ತಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಆಪಾದನೆ ಮಾಡಿದ್ದಾರೆ. ಪ್ರಕರಣದ ತನಿಖೆಯನ್ನು ಸಿಐಡಿ ಮಾಡಬೇಕೆಂದು ಆಗ್ರಹಿಸಿದ್ದಾರೆ ಗೋಸ್ವಾಮಿ.
ಈ ವರ್ಷ ವಿಧಾನ ಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಪ್ರಚಾರದ ಹೊಣೆಗಾರಿಕೆಯನ್ನು ಕೈಲಾಶ್ ವಿಜಯ್ ವರ್ಗಿಯಾ ವಹಿಸಿಕೊಂಡಿದ್ದಾರೆ.