ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದೇ ಇದ್ದರೂ ಸಹ ಸರ್ಕಾರೀ ಬಂಗಲೆಯಲ್ಲಿ ಸುದೀರ್ಘಾವಧಿಯಿಂದ ವಾಸವಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದೀಗ ಸರ್ಕಾರದ ಆದೇಶದಂತೆ ಆ ಮನೆಯಿಂದ ಆಚೆ ಬರಬೇಕಿದೆ.
ಇದೇ ವೇಳೆ, 35 ಲೋಧಿ ಸ್ಟೇಟ್ ಬಂಗಲೆಯನ್ನು ತಾವು ಖಾಲಿ ಮಾಡಿಕೊಂಡು ಹೋದ ಬಳಿಕ ಅಲ್ಲಿ ಬಂದು ನೆಲೆಸಲಿರುವ ಬಿಜೆಪಿ ನಾಯಕ ಅನಿಲ್ ಬಲುನಿರನ್ನು ಪ್ರಿಯಾಂಕಾ ಚಹಾ ಕುಡಿಯಲು ಆಹ್ವಾನಿಸಿದ್ದಾರೆ.
1997ರಿಂದಲೂ ಈ ಬಂಗಲೆಯಲ್ಲಿ ವಾಸ ಮಾಡುತ್ತಿರುವ ಪ್ರಿಯಾಂಕಾಗೆ ಇದ್ದ ಎಸ್‌ಪಿಜಿ ಭದ್ರತೆಯನ್ನೂ ಸಹ ಇದೇ ವೇಳೆ ಹಿಂತೆಗೆದುಕೊಳ್ಳಲಾಗಿದೆ. ಆಕೆಗೆ ನೀಡಲಾಗಿದ್ದ ಈ ಬಂಗಲೆಯನ್ನು ಜುಲೈ 1ರಿಂದ ಜಾರಿಗೆ ಬರುವಂತೆ ಹಿಂದಕ್ಕೆ ಪಡೆದುಕೊಳ್ಳಲಾಗಿದ್ದು, ಆಗಸ್ಟ್ 1ರ ಒಳಗೆ ಖಾಲಿ ಮಾಡಿಕೊಂಡು ಹೋಗಲು ಸೂಚಿಸಲಾಗಿದೆ.