ಎಲ್ಲಾ ವಸ್ತುಗಳ ದರ ಏರಿಕೆಯಾಗುತ್ತಿರುವ ಈ ದುಬಾರಿ ದುನಿಯಾದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಮಾತ್ರ ಉತ್ತರ ಪ್ರದೇಶದ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಒಂದನ್ನ ನೀಡಿದೆ. ಹೌದು..! ಉತ್ತರ ಪ್ರದೇಶದಲ್ಲಿ ಬಿಯರ್ ದರವನ್ನ 20 ರೂಪಾಯಿ ಕಡಿಮೆ ಮಾಡಲಾಗಿದೆ.
ಆದರೆ ವಿದೇಶಿ ಮದ್ಯಗಳ ದರದಲ್ಲಿ 15 ರಿಂದ 20 ಪ್ರತಿಶತ ಏರಿಕೆ ಕಂಡಿದೆ. ಬಿಯರ್ನ ಅಬಕಾರಿ ಹಾಗೂ ಪರವಾನಿಗಿ ಶುಲ್ಕದಲ್ಲಿ ಮಾತ್ರ ಯಾವುದೇ ವಿನಾಯಿತಿ ನೀಡಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.
ಕೊರೊನಾ ವೈರಸ್ ಸಂಕಷ್ಟದಿಂದಾಗಿ ಉತ್ತರ ಪ್ರದೇಶದಲ್ಲಿ ಬಿಯರ್ ಮಾರಾಟಕ್ಕೆ ಭಾರೀ ಹೊಡೆತ ಬಿದ್ದಿತ್ತು. ಕಳೆದ ವರ್ಷ ಏಪ್ರಿಲ್ನಿಂದ ನವೆಂಬರ್ವರೆಗೆ ಉತ್ತರ ಪ್ರದೇಶದಲ್ಲಿ ಕೇವಲ 17.28 ಕೋಟಿ ಬಿಯರ್ ಬಾಟಲಿ ಖಾಲಿಯಾಗಿದೆ. ಈ ಮೂಲಕ ಉತ್ತರ ಪ್ರದೇಶಕ್ಕೆ ಬಿಯರ್ ಉದ್ಯಮದಲ್ಲಿ 36 ಪ್ರತಿಶತ ನಷ್ಟ ಉಂಟಾಗಿತ್ತು. ಹೀಗಾಗಿ ಉತ್ತರ ಪ್ರದೇಶದಲ್ಲಿ ಮತ್ತೆ ಬಿಯರ್ ಮಾರಾಟದ ಪ್ರಗತಿಯನ್ನ ಹೆಚ್ಚಿಸಬೇಕು ಎಂಬ ಕಾರಣಕ್ಕೆ ಈ ಮಹತ್ವದ ಕ್ರಮವನ್ನ ಕೈಗೊಳ್ಳಲಾಗಿದೆ.