
ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಟ್ವಿಟರ್ನಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಕ್ಲಿಪ್ನಲ್ಲಿ ಮೂರು ಕರಡಿಗಳು ಬಹಳ ಶಾಂತವಾಗಿ ಪೊಲೀಸ್ ಠಾಣೆಯ ಆವರಣ ಪ್ರವೇಶಿಸಿರೋದನ್ನ ಕಾಣಬಹುದಾಗಿದೆ.
ಈ ವಿಡಿಯೋವನ್ನ ಟ್ವಿಟರ್ನಲ್ಲಿ ಹಂಚಿಕೊಂಡ ನಂತರ ಈ ವಿಡಿಯೋ ಸಖತ್ ವೈರಲ್ ಆಗಿದ್ದು ಕೆಲವೇ ಗಂಟೆಗಳಲ್ಲಿ ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.
ಈ ಟ್ವೀಟ್ನ್ನ ರಿ ಟ್ವೀಟ್ ಮಾಡಿದ ಅನೇಕರು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ ಕರಡಿಗಳ ವಿಡಿಯೋವನ್ನೂ ಶೇರ್ ಮಾಡಿದ್ದಾರೆ. ಅಂದಹಾಗೆ ಈ ಪ್ರದೇಶದಲ್ಲಿ ಈ ರೀತಿ ಕಾಡು ಪ್ರಾಣಿಗಳು ಓಡಾಡೋದು ಸಾಮಾನ್ಯವಾಗಿದೆ.