
ಆದರೆ ಈ ಮಾತಿಗೆ ವಿರುದ್ಧವಾಗಿ ನಿಂತ ದೆಹಲಿ ಮೂಲದ ದಂಪತಿ ವಿಭಿನ್ನವಾಗಿ ಮದುವೆ ಪ್ಲಾನ್ ಮಾಡೋದರ ಜೊತೆಗೆ ಪರಿಸರ ಮಾಲಿನ್ಯವನ್ನೂ ತಡೆಗಟ್ಟಿದ್ದಾರೆ.
32 ವರ್ಷದ ವರ ಆದಿತ್ಯ ಅಗರ್ವಾಲ್, ದೊಡ್ಡ ಕಾರಿನಲ್ಲಿ ಮದುವೆ ದಿಬ್ಬಣವನ್ನ ಕಲ್ಯಾಣಮಂಟಪಕ್ಕೆ ತರುವ ಬದಲು ಬೈಕ್ನಲ್ಲಿ ಬರುವ ಮೂಲಕ ಸುದ್ದಿಯಾಗಿದ್ದಾರೆ. ಅಂದಹಾಗೆ ಈ ರೀತಿ ಕಡಿಮೆ ವೆಚ್ಚದಲ್ಲಿ ಮದುವೆ ಆಗಬೇಕು ಅನ್ನೋದು ಮಧುಮಗಳು ಮಾಧುರಿ ಬಲೋಡಿ ಅವರ ಕನಸಾಗಿತ್ತು. ಮಾಧುರಿಯ ಈ ನಿರ್ಧಾರಕ್ಕೆ ಕುಟುಂಬಸ್ಥರು ಸಾಥ್ ನೀಡಿದ್ದಾರೆ.
ನಾವು ಸುಖಾ ಸುಮ್ಮನೇ ಮನೆಯಿಂದ ಯಾವುದೇ ವಸ್ತುವನ್ನ ಬಿಸಾಡೋದಿಲ್ಲ. ನನ್ನ ಬಾಲ್ಯದ ದಿನದಲ್ಲಿ ಇದ್ದ ವಸ್ತುಗಳು ಇನ್ನೂ ನಮ್ಮ ಮನೆಯಲ್ಲಿ ಜೋಪಾನವಾಗಿದೆ ಎಂದು ಮಾಧುರಿ ಹೇಳಿದ್ರು.
ಈ ಮದುವೆಯಲ್ಲಿ ಆಮಂತ್ರಣ ಪತ್ರಿಕೆಯನ್ನ ಮುದ್ರಿಸಿರಲಿಲ್ಲ. ಮಾಧುರಿ ಸ್ವತಃ ತಾವೇ ಇ ಆಮಂತ್ರಣ ಪತ್ರಿಕೆಯನ್ನ ರೆಡಿ ಮಾಡಿದ್ದಾರೆ. ವಧು ವರರ ಬ್ಯಾನರ್ನ್ನು ಮುದ್ರಿಸುವ ಬದಲಾಗಿ ಬಳಪದಲ್ಲಿ ಬರೆಯಲಾಗಿತ್ತು.
ವಧು ವರರಿಬ್ಬರು ಹೂವಿನ ಮಾಲೆಯ ಬದಲು ತುಳಸಿ ಹಾರವನ್ನ ಬದಲಾಯಿಸಿಕೊಂಡಿದ್ದರು. ಇದರ ಹಿಂದೆಯೂ ಕಾರಣವಿದೆ. ಈ ತುಳಸಿಯನ್ನ ಒಣಗಿಸಿ ಪುಡಿ ಮಾಡಿ ಚಹಕ್ಕೆ ಬಳಸಬಹುದು ಎಂಬುದು ಮಾಧುರಿಯ ಯೋಚನೆಯಾಗಿದೆ.
ಎರಡೂ ಕುಟುಂಬಸ್ಥರು ಯಾವುದೇ ಉಡುಗೊರೆಗಳನ್ನ ವರ್ಗಾವಣೆ ಮಾಡಿಕೊಂಡಿಲ್ಲ. ಬದಲಾಗಿ ಒಂದು ಕೆಜಿ ಹಣ್ಣನ್ನು ಒಬ್ಬರಿಗೊಬ್ಬರು ನೀಡಿದ್ದಾರೆ. ಸಂಬಂಧಿಗಳು ಮದುವೆ ದಿನ ಅತಿಥಿಗಳಂತೆ ಬಂದಿರಲಿಲ್ಲ. ಬದಲಾಗಿ ಒಬ್ಬೊಬ್ಬರು ಒಂದೊಂದು ಪಾತ್ರವನ್ನ ನಿರ್ವಹಿಸಿದ್ದಾರೆ. ಮಾಧುರಿ ಸೋದರ ಸಂಬಂಧಿ ಪುರೋಹಿತನಾಗಿದ್ದರೆ, ಸ್ನೇಹಿತರೊಬ್ಬರು ಫೋಟೋಗ್ರಾಫರ್ ಆಗಿದ್ದರು. ಕಲ್ಯಾಣ ಮಂಟಪದ ಸಂಪೂರ್ಣ ಅಲಂಕಾರವನ್ನ ಕುಟುಂಬಸ್ಥರು ಹಾಗೂ ಸ್ನೇಹಿತರು ಸೇರಿ ಮಾಡಿದ್ದರು.
ಇನ್ನು ಮದುವೆಯ ಧಿರಿಸಿಗೂ ಈ ದಂಪತಿ ಅತ್ಯಂತ ಕಡಿಮೆ ಹಣವನ್ನ ಖರ್ಚು ಮಾಡಿದೆ. ಮಾಧುರಿ ಧರಿಸಿದ್ದ ಸೀರೆಯ ಬೆಲೆ ಕೇವಲ 2500 ರೂ. ಆಗಿದ್ದರೆ ಆದಿತ್ಯ 3000 ರೂಪಾಯಿಯ ಶೆರ್ವಾನಿ ಧರಿಸಿದ್ದರು. ಇಬ್ಬರೂ ಹಳೆಯ ಆಭರಣವನ್ನೇ ಧರಿಸಿದ್ದರು. ಈ ಸಂಪೂರ್ಣ ಮದುವೆಗೆ 2 ಲಕ್ಷ ರೂಪಾಯಿಗಿಂತಲೂ ಕಡಿಮೆ ವೆಚ್ಚವಾಗಿದೆ ಎಂದು ಮಾಧುರಿ ಹೇಳಿದ್ರು.
ಮದುವೆಗೆ ಬಂದ ಅತಿಥಿಗಳಿಗೆ ಸಿಹಿ ತಿಂಡಿಗಳ ಪೊಟ್ಟಣವನ್ನ ನೀಡುವ ಬದಲು ಸಸಿಗಳನ್ನ ನೀಡಲಾಯ್ತು. ಮಾತ್ರವಲ್ಲದೇ ಆ ಸಸಿಗಳು ಎಷ್ಟು ಬೆಳವಣಿಗೆ ಹೊಂದಿದೆ ಎಂಬ ವಿಚಾರವನ್ನ ಹಂಚಿಕೊಳ್ಳುವ ಮೂಲಕ ಅತಿಥಿಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ.
ಮಾಧುರಿಗೆ ಇಂತಹ ಪರಿಸರ ಸ್ನೇಹಿ ಮದುವೆಯ ಐಡಿಯಾ ಬರಲು ಸ್ಪೂರ್ತಿ ಆಕೆಯ ತಾಯಿಯಂತೆ. ಆಕೆಯ ತಾಯಿ ಸಾಮಾನ್ಯವಾಗಿ ಎಲ್ಲಾ ವಸ್ತುಗಳನ್ನ ಮರುಬಳಕೆ ಮಾಡುತ್ತಾರಂತೆ. ಹೀಗಾಗಿ ಕಳೆದ 14 ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಜನವರಿ 14ರಂದು ಇಂತಹ ಪರಿಸರ ಸ್ನೇಹಿ ಮದುವೆ ಕಾರ್ಯಕ್ರಮದಲ್ಲಿ ಹೊಸ ಬಾಳಿಗೆ ಕಾಲಿಟ್ಟಿದೆ.