ಬ್ಯಾಂಕ್ ಸಿಇಒ ಒಬ್ಬರು ತಮಗೆ ಅಕ್ಷರ ಕಲಿಸಿದ ಶಿಕ್ಷಕರಿಗೆ 30 ಲಕ್ಷ ರೂ. ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ ಹಿಂದಿನ ಕಾರಣ ಬಹಿರಂಗವಾಗಿದೆ.
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಎಂಡಿ ಮತ್ತು ಸಿಇಒ ವಿ. ವೈದ್ಯನಾಥನ್ ಅವರು ತಮಗೆ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದ ಗುರುಡಿಯಲ್ ಸರೂಪ್ ಸೈನಿಗೆ ಸುಮಾರು 30 ಲಕ್ಷ ರೂ.ಗಳ ಮೌಲ್ಯದ ಒಂದು ಲಕ್ಷ ಈಕ್ವಿಟಿ ಷೇರುಗಳನ್ನು ವರ್ಗಾಯಿಸಿದ್ದರು.
ತಮ್ಮ ಜೀವನದ ಆರಂಭಿಕ ಹಂತದಲ್ಲಿ ಸೈನಿ ಅವರಿಗೆ ಸಹಾಯ ಮಾಡಿದ್ದಕ್ಕಾಗಿ ವೈದ್ಯನಾಥನ್ ಷೇರುಗಳನ್ನು ವರ್ಗಾಯಿಸಿದರು ಎಂದು ತಿಳಿದುಬಂದಿದೆ. ಅದರಲ್ಲೂ ಸಂದರ್ಶನಕ್ಕಾಗಿ ಹೊರಟು ನಿಂತಾಗ ಪ್ರಯಾಣಿಸಲು ಸೈನಿ ಅವರು ವೈದ್ಯನಾಥನ್ ಅವರಿಗೆ ಹಣವನ್ನು ನೀಡಿದ್ದರಂತೆ.
ವೈದ್ಯನಾಥನ್ ಬಿಐಟಿ ಪ್ರವೇಶ ಪಡೆದಾಗ ಸಂದರ್ಶನಕ್ಕೆ ಹಾಜರಾಗಲು ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆಯ ಪೂರ್ಣಗೊಳಿಸಲು ತಮ್ಮೂರಿಂದ ಅಲ್ಲಿಗೆ ಪ್ರಯಾಣಿಸಲು ಅವರ ಬಳಿ ಹಣವಿರಲಿಲ್ಲ. ಆಗ ಈ ಶಿಕ್ಷಕರು 500 ರೂ. ನೀಡಿದ್ದರು.
ವೈದ್ಯನಾಥನ್ ಅವರು ಮೆಸ್ರಾಗೆ ತೆರಳಿ ಬಿಐಟಿಯಲ್ಲಿ ಅಧ್ಯಯನ ಮಾಡಿದರು ಮತ್ತು ನಂತರ ವೃತ್ತಿಪರ ಜೀವನದಲ್ಲಿ ಉತ್ತಮ ಸಾಧನೆ ಮಾಡಿದರು.
ಮುಂದೆ ವೈದ್ಯನಾಥನ್ ತಮಗೆ ನೆರವಾದ ಶಿಕ್ಷಕರನ್ನು ಪತ್ತೆ ಮಾಡಿ ಆಗ್ರಾಗೆ ತೆರಳಿ ಕೃತಜ್ಞತೆ ಅರ್ಪಿಸಿದರು. ಅವರು ತಮ್ಮ ವೈಯಕ್ತಿಕವಾಗಿ ಗಳಿಸಿದ್ದ ಐಡಿಎಫ್‌ಸಿ ಎಫ್‌ಐಆರ್‌ಎಸ್ಟಿ ಬ್ಯಾಂಕ್ ಲಿಮಿಟೆಡ್‌ನ 1,00,000 ಇಕ್ವಿಟಿ ಷೇರುಗಳನ್ನು ಉಡುಗೊರೆಯಾಗಿ ನೀಡಿದರು.
https://www.facebook.com/peri.maheshwer/posts/10164801673075151