ಅಂತರಾಷ್ಟ್ರೀಯ ವಿಮಾನ ಹಾರಾಟ ನಿಷೇಧ ಇನ್ನೂ ಒಂದು ತಿಂಗಳು ಮುಂದೂಡಲ್ಪಟ್ಟಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಸೆಪ್ಟೆಂಬರ್ 30ರವರೆಗೆ ವಿಮಾನ ಹಾರಾಟ ನಿಷೇಧ ವಿಸ್ತರಿಸಿರುವುದಾಗಿ ಹೇಳಿದೆ.
ಡೈರೆಕ್ಟರೇಟ್ ಜನರಲ್ ಇಂದು ಸುತ್ತೋಲೆ ಹೊರಡಿಸಿದೆ. ಈ ಹಿಂದೆ ವಿಮಾನ ಹಾರಾಟ ನಿಷೇಧವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿತ್ತು. ಈಗ ಅದನ್ನು ಸೆಪ್ಟೆಂಬರ್ 30 ರವರೆಗೆ ಮುಂದೂಡಿದೆ. ಈ ಆದೇಶವು ಸರಕು ವಿಮಾನಗಳು ಮತ್ತು ವಿಶೇಷ ಅನುಮತಿ ಪಡೆದ ವಿಮಾನಗಳಿಗೆ ಅನ್ವಯಿಸುವುದಿಲ್ಲ.
ಕೊರೊನಾ ಹಿನ್ನಲೆಯಲ್ಲಿ ಮಾರ್ಚ್ 22ರಿಂದ ಅಂತರಾಷ್ಟ್ರೀಯ ವಿಮಾನ ಹಾರಾಟವನ್ನು ನಿಲ್ಲಿಸಲಾಗಿತ್ತು. ಮಾರ್ಚ್ 25 ರಿಂದ ದೇಶೀಯ ವಿಮಾನಯಾನಗಳನ್ನು ನಿಷೇಧಿಸಲಾಗಿತ್ತು. ಆದರೆ ಮೇ 25 ರಿಂದ ಸೀಮಿತ ಸಂಖ್ಯೆಯ ದೇಶೀಯ ವಿಮಾನಯಾನಗಳನ್ನು ಪ್ರಾರಂಭಿಸಲಾಗಿದೆ.