alex Certify ಮಹಾರಾಷ್ಟ್ರ ಚುನಾವಣೆಗಳಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಬಳಕೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾರಾಷ್ಟ್ರ ಚುನಾವಣೆಗಳಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಬಳಕೆ….?

ಮುಂಬೈ:ವಿಧಾನ ಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತದಾನಕ್ಕೆ ಮತ ಪತ್ರ, (ಬ್ಯಾಲೆಟ್ ಪೇಪರ್) ಹಾಗೂ ಮತ ಯಂತ್ರ (ಇವಿಎಂ) ಎರಡರಲ್ಲೂ ಅವಕಾಶ ನೀಡುವ ಬಗ್ಗೆ ಕಾಯ್ದೆ ರೂಪಿಸಿ ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ನಾನಾ ಪಟೋಲೆ ಸರ್ಕಾರಕ್ಕೆ ಸೂಚಿಸಿದ್ದಾರೆ.

ನಾಗಪುರದಿಂದ ಬಂದ ಪ್ರದೀಪ ಉಕೆ ಎಂಬುವವರ ಮನವಿಯೊಂದನ್ನು ಆಧರಿಸಿ ಅವರು ಬುಧವಾರ ವಿಧಾನಭವನದಲ್ಲಿ ಸಭೆ ನಡೆಸಿದರು. ವೈದ್ಯಕೀಯ ಶಿಕ್ಷಣ ಸಚಿವ ಅಮಿತ್ ದೇಶಮುಖ್, ಮುಖ್ಯ ಚುನಾವಣಾಧಿಕಾರಿ ಬಲದೇವ ಸಿಂಗ್ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಧಾನಿ ವಿರುದ್ಧ ಪೋಸ್ಟ್: ಕಿರುತೆರೆ ನಟನ ವಿರುದ್ಧ ನಮೋ ಅಭಿಮಾನಿಗಳ ಆಕ್ರೋಶ

ದೇಶದಲ್ಲಿ ಇವಿಎಂ ಬಳಕೆಯ ಬಗ್ಗೆ ಹಲವು ಆಕ್ಷೇಪಣೆಗಳಿವೆ. ಇದರಿಂದ ಮತದಾರರಿಗೆ ಇವಿಎಂ ಅಥವಾ ಬ್ಯಾಲೆಟ್ ಬಳಕೆಯ ಆಯ್ಕೆ ಅವಕಾಶವಿರಬೇಕು. ಸಂವಿಧಾನದ ಆರ್ಟಿಕಲ್‌328 ರಲ್ಲಿ ಈ ಸಂಬಂಧ ಕಾಯ್ದೆ ರೂಪಿಸಲು ರಾಜ್ಯಗಳಿಗೆ ಅವಕಾಶವಿದೆ ಎಂದು ಸ್ಪೀಕರ್ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...