ಬಹಳ ದಿನಗಳಿಂದ ಸುದ್ದಿಯಲ್ಲಿರುವ ಬಜಾಜ್ ನ ಡೊಮಿನಾರ್ 250 ಸ್ಪೋರ್ಟ್ಸ್ ಟೂರರ್ ಬೈಕಿನ ರೋಡ್ ಟೆಸ್ಟಿಂಗ್ ಮಾಡಲಾಗಿದೆ. ಈ ಬೈಕಿನ ಚಿತ್ರಗಳನ್ನು ಅಧಿಕೃತವಾಗಿ ಹೊರಬಿಡಲಾಗಿದೆ.
ಸುಝುಕಿ ಗಿಕ್ಸರ್ 250, KTM 250 ಡ್ಯೂಕ್ ಹಾಗೂ ಯಮಾಹಾ FZ 25 ಬೈಕುಗಳಿಗೆ ಪ್ರತಿಯಾಗಿ ಈ ಡೊಮಿನಾರ್ 250 ಬಂದಿದೆ. ತಮ್ಮ 150 ಸಿಸಿ ಬೈಕ್ನಿಂದ ಅಪ್ಗ್ರೇಡ್ ಆಗಲು ಬಯಸುವವರಿಗೆ ಈ ಬೈಕ್ ತಕ್ಷಣದ ಆಯ್ಕೆಗಳಲ್ಲಿ ಒಂದಾಗಿದೆ.
ಈ ಬೈಕ್ನಲ್ಲಿ 248.8cc DOHC ಇಂಜಿನ್ ಇದ್ದು, 27 PSನಷ್ಟು ಶಕ್ತಿಶಾಲಿಯಾಗಿದೆ. ಇದೇ ಬೈಕನ್ನ 400cc ಅವತರಣಿಕೆಯೂ ಸಹ ಲಭ್ಯವಿದೆ. ಈ ಬೈಕ್ಗೆ ಫ್ರಿಸ್ಕ್ ಬ್ರೇಕ್ಗಳೂ ಸಹ ಇವೆ. ಬಹಳ ಟ್ರೆಂಡಿ ಲುಕ್ ಮೂಲಕ ಯುವ ಸಮೂಹವನ್ನು ಟಾರ್ಗೆಟ್ ಮಾಡಿದೆ ಬಜಾಜ್.
ಡೊಮಿನಾರ್ 250ಯ ಸದ್ಯದ ಬೆಲೆಯು (ಎಕ್ಸ್-ಶೋರೂಂ) 1.60 ಲಕ್ಷ ರೂ.ಗಳಷ್ಟಿದೆ. ಡೊಮಿನಾರ್ 400 ಅವತರಣಿಕೆಯ ಬೆಲೆಯು 1.94 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.