ಕೊರೊನಾದಿಂದ ಗುಣಮುಖರಾಗಿರುವ ಗುಜರಾತ್ ನ ಮಾಜಿ ಮುಖ್ಯಮಂತ್ರಿ ಶಂಕರಸಿಂಹ ವಘೇಲಾ ತಾವು ವರ್ಕೌಟ್ ಮಾಡುವ ಫೋಟೋ ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
80 ವರ್ಷದ ವಘೇಲಾ ಅವರು ವೇಟ್ ಲಿಫ್ಟಿಂಗ್ ಮಾಡುವ ಹಾಗೂ ಜಾಗಿಂಗ್ ಮಾಡುವ ಎರಡು ಫೋಟೋಗಳನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದು, ಗುಜರಾತಿ ಭಾಷೆಯಲ್ಲಿ ತನ ಫಿಟ್ + ಮನ ಫಿಟ್ = ಲೈಫ್ ಹಿಟ್ (ದೇಹ ಸ್ವಸ್ಥ+ಮನಸ್ಸು ಸ್ವಸ್ಥ= ಯಶಸ್ವಿ ಜೀವನ) ಎಂದು ಬರೆದಿದ್ದಾರೆ.
ಅವರ ಫೋಟೋಗಳನ್ನು ಸಾಕಷ್ಟು ಜನ ರೀ ಟ್ವೀಟ್ ಮಾಡಿದ್ದಾರೆ. “ಕೊರೊನಾ ವಿರುದ್ಧದ ಯುದ್ಧ ಗೆದ್ದು ಬಂದಿದ್ದಾರೆ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ಈ ಫೋಟೋಗಳು ಯುವಕರಿಗೆ ಸ್ಪೂರ್ತಿ ನೀಡುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.