ಡೆಹ್ರಾಡೂನ್: ಕೆಮ್ಮಿನ ಔಷಧಕ್ಕೆ ಲೈಸೆನ್ಸ್ ಪಡೆದು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಕೊರೋನಾ ಮಾತ್ರೆ ಬಿಡುಗಡೆ ಮಾಡಿದೆ ಎನ್ನಲಾಗಿದ್ದು ಸಂಸ್ಥೆಗೆ ನೋಟಿಸ್ ನೀಡಲು ಉತ್ತರಾಖಂಡದ ಆಯುರ್ವೇದ ಇಲಾಖೆ ಮುಂದಾಗಿದೆ.
ಕೆಮ್ಮು, ಜ್ವರಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧ ತಯಾರಿಸುವುದಾಗಿ ಅನುಮತಿ ಪಡೆದು ಅದನ್ನು ಕೊರೋನಾ ನಿವಾರಕ ಔಷಧ ಎಂದು ಬಿಡುಗಡೆ ಮಾಡಲಾಗಿದೆ. ಈ ಕಾರಣದಿಂದ ಪತಂಜಲಿ ಸಂಸ್ಥೆಗೆ ನೋಟಿಸ್ ನೀಡಲಾಗುವುದು ಎಂದು ಹೇಳಲಾಗಿದೆ.
ಉತ್ತರಾಖಂಡ್ ಆಯುರ್ವೇದ ಇಲಾಖೆಯ ಔಷಧ ಲೈಸೆನ್ಸ್ ವಿತರಣ ವಿಭಾಗದ ಅಧಿಕಾರಿಯೊಬ್ಬರು ಈ ಕುರಿತು ಮಾತನಾಡಿ, ಜ್ವರ, ಕೆಮ್ಮು ಬರದಂತೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ ಹೆಸರಲ್ಲಿ ಪತಂಜಲಿ ಸಂಸ್ಥೆ ಲೈಸೆನ್ಸ್ ಪಡೆಯಲು ಅರ್ಜಿ ಸಲ್ಲಿಸಿದ್ದು ಅದನ್ನು ಕೊರೋನಾ ಔಷಧ ಎಂದು ಬಿಡುಗಡೆ ಮಾಡಲಾಗಿದೆ. ಹೀಗಾಗಿ ನೋಟಿಸ್ ಜಾರಿ ಮಾಡಲಾಗುವುದು.
ಇನ್ನು ಜನರನ್ನು ದಾರಿತಪ್ಪಿಸುವ ಆರೋಪದ ಮೇಲೆ ರಾಮದೇವ್ ಮತ್ತು ಪತಂಜಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.