ನವದೆಹಲಿ: ಕೊರೊನಾ ಸೋಂಕು ತಡೆಗೆ ಪರಿಣಾಮಕಾರಿ ಔಷಧ ಬಿಡುಗಡೆ ಮಾಡಿದ್ದ ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ.
ಪತಂಜಲಿ ಆಯುರ್ವೇದ ಸಂಸ್ಥೆ ಮಂಗಳವಾರ ಆಯುರ್ವೇದ ವಿಜಯ ಕೊರೋನಿಲ್ ಎಂಬ ಔಷಧಗಳನ್ನು ಬಿಡುಗಡೆ ಮಾಡಿದ್ದು, ಕೊರೊನಾ ಸೋಂಕಿತರ ಮೇಲೆ ಪ್ರಯೋಗಿಸಿದಾಗ ಶೇಕಡ 100 ರಷ್ಟು ಗುಣಮುಖರಾಗಿದ್ದಾರೆ ಎಂದು ಹೇಳಿ ಪ್ರಚಾರ ನಡೆಸಲಾಗಿತ್ತು.
ಆದರೆ, ಕೊರೋನಾಗೆ ಪತಂಜಲಿ ಔಷಧ ಬಳಸದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಔಷಧ ಪ್ರಚಾರಕ್ಕೆ ತಡೆ ನೀಡಿದೆ. ಆಯುಷ್ ಇಲಾಖೆಯಿಂದ ಔಷಧಿ ಕುರಿತಾಗಿ ಮಾಹಿತಿ ಕೇಳಲಾಗಿದೆ. ಔಷಧಿಯಲ್ಲಿರುವ ಅಂಶಗಳು, ಪರೀಕ್ಷೆಯ ಸ್ಯಾಂಪಲ್, ಆಸ್ಪತ್ರೆ, ಪ್ರಯೋಗ ಎಲ್ಲಿ ನಡೆಯಿತು ಎಂಬ ಬಗ್ಗೆ ಮಾಹಿತಿ ಇಲ್ಲವಾಗಿದೆ. ಹಾಗಾಗಿ ಔಷಧ ಮಾರಾಟ ಪ್ರಚಾರ ನಡೆಸದಂತೆ ತಿಳಿಸಲಾಗಿದೆ. ಕ್ಲಿನಿಕಲ್ ಟ್ರಯಲ್ ಗೆ ನೋಂದಣಿ ಮಾಡಲಾಗಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗಿದ್ದು ಆಯುಷ್ ಸಚಿವಾಲಯ ಸದ್ಯಕ್ಕೆ ಪತಂಜಲಿ ಕೊರೋನಾ ಔಷಧ ಮಾರಾಟಕ್ಕೆ ಬ್ರೇಕ್ ಹಾಕಿದೆ ಎನ್ನಲಾಗಿದೆ.