alex Certify BIG NEWS: ಕೊರೊನಾದಿಂದ ರಕ್ಷಣೆ ಪಡೆಯುವ ಸುಲಭ ವಿಧಾನ ಹೇಳಿದ ಆಯುಷ್ ಸಚಿವಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾದಿಂದ ರಕ್ಷಣೆ ಪಡೆಯುವ ಸುಲಭ ವಿಧಾನ ಹೇಳಿದ ಆಯುಷ್ ಸಚಿವಾಲಯ

ಪ್ರಸ್ತುತ ಲಕ್ಷಾಂತರ ಮಂದಿ ಕೊರೊನಾಗೆ ಬಲಿಯಾಗ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಮಹತ್ವ ಗೊತ್ತಾಗ್ತಿದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದಲ್ಲಿ ಕೊರೊನಾ ಸೋಂಕಿನಿಂದ ಬೇಗ ಮುಕ್ತಿ ಪಡೆಯಬಹುದು. ಯಾವುದೇ ಅಪಾಯವಿಲ್ಲದೆ ಕೊರೊನಾ ಗೆದ್ದು ಬರಬಹುದು.

ಕೊರೊನಾ ವೈರಸ್‌ನಿಂದ ಜನರನ್ನು ರಕ್ಷಿಸಲು ಮತ್ತು  ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ದೇಶದ ಆಯುಷ್ ಸಚಿವಾಲಯವು ಕೆಲವು ಸಲಹೆಗಳನ್ನು ನೀಡಿದೆ. ಆಯುರ್ವೇದ ವಿಧಾನಗಳನ್ನು ಅನುಸರಿಸುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಯಾವುದೇ ಅಡ್ಡ ಪರಿಣಾಮವಿಲ್ಲದೆ ರೋಗವನ್ನು ಗೆಲ್ಲಬಹುದು.

ದೇಹದ ರೋಗನಿರೋಧಕ ಶಕ್ತಿಯನ್ನು ನೈಸರ್ಗಿಕ ವಿಧಾನಗಳಿಂದ ಬಲಪಡಿಸಬಹುದು. ಪ್ರತಿದಿನ ಚ್ಯವನ್‌ಪ್ರಶ್ ಸೇವಿಸಬೇಕು. ಅರಿಶಿನ ಹಾಲನ್ನು ದಿನಕ್ಕೆ 1 ಅಥವಾ 2 ಬಾರಿ ಸೇವಿಸಬೇಕು. ಗಿಡಮೂಲಿಕೆ ಚಹಾ ಅಥವಾ ತುಳಸಿ, ದಾಲ್ಚಿನ್ನಿ, ಕರಿಮೆಣಸು, ಶುಂಠಿ ಮತ್ತು ಒಣ ದ್ರಾಕ್ಷಿಯಿಂದ ಮಾಡಿದ ಕಷಾಯವನ್ನು ದಿನಕ್ಕೆ 1-2 ಬಾರಿ ಕುಡಿಯಿರಿ.

ಕೊರೊನಾ ವೈರಸ್ ದೇಶಾದ್ಯಂತ ಹರಡಿದ್ದು, ತಣ್ಣೀರು ಅಥವಾ ತಣ್ಣನೆಯ ವಸ್ತುಗಳನ್ನು ಸೇವಿಸುವುದನ್ನು ತಪ್ಪಿಸಿ. ಗಂಟಲು ಹಾಳಾಗುವ ಆಹಾರ ಸೇವನೆ ಮಾಡಬಾರದು. ದಿನಕ್ಕೆ ಹಲವಾರು ಬಾರಿ ಬಿಸಿ ನೀರು ಕುಡಿಯಿರಿ. ಬಿಸಿ ನೀರಿಗೆ ಒಂದು ಚಿಟಿಕೆ ಉಪ್ಪು ಮತ್ತು ಅರಿಶಿನ ಸೇರಿಸಿ ಗಾರ್ಗಲ್ ಮಾಡಿ. ಮನೆಯಲ್ಲಿ ಮಾಡಿದ ಆಹಾರವನ್ನೇ ಈ ಸಮಯದಲ್ಲಿ ಸೇವನೆ ಮಾಡಿ. ಹೊರಗಿನ ತಿಂಡಿಯನ್ನು ಸೇವಿಸಬೇಡಿ. ಆಹಾರಕ್ಕೆ ಅರಿಶಿನ, ಜೀರಿಗೆ, ಬೆಳ್ಳುಳ್ಳಿ, ಶುಂಠಿ ಮತ್ತು ಕೊತ್ತಂಬರಿ ಮುಂತಾದ ಮಸಾಲೆ ಸೇರಿಸಿ. ಈ ಆಹಾರ ಸ್ವಾಭಾವಿಕವಾಗಿ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.

ಇದಲ್ಲದೆ ಮನೆಯಲ್ಲಿಯೇ ಯೋಗ ಮಾಡಬೇಕು. ಯೋಗ, ಪ್ರಾಣಾಯಾಮ, ಅನುಲೋಮ-ವಿಲೋಮ, ಆಳವಾದ ಉಸಿರಾಟದ ವ್ಯಾಯಾಮ ಮಾಡುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ. ದಿನಕ್ಕೆ ಒಂದು ಅಥವಾ ಎರಡು ಬಾರಿ ಉಗಿ ತೆಗೆದುಕೊಳ್ಳಿ. ಪುದೀನಾ ಎಲೆಗಳನ್ನು ಹಾಕಿ ಉಗಿ ತೆಗೆದುಕೊಳ್ಳಬೇಕು. ಕೆಮ್ಮು ಕಾಡುತ್ತಿದ್ದರೆ ಲವಂಗದ ಪುಡಿಯನ್ನು ಜೇನು ತುಪ್ಪಕ್ಕೆ ಬೆರೆಸಿ ಸೇವನೆ ಮಾಡಬೇಕೆಂದು ಆಯುಷ್ ಸಚಿವಾಲಯ ಹೇಳಿದೆ. ಒಂದು ವೇಳೆ ಕೆಮ್ಮು ಜಾಸ್ತಿಯಿದ್ದರೆ ವೈದ್ಯರನ್ನು ಭೇಟಿಯಾಗುವಂತೆ ಹೇಳಲಾಗಿದೆ. ಆಯಿಲ್ ಫುಲ್ಲಿಂಗ್ ಕೂಡ ಒಳ್ಳೆಯದು ಎಂದು ಆಯುಷ್ ಸಚಿವಾಲಯ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...