ಅಯೋಧ್ಯೆಯಲ್ಲಿರುವ ರಾಮ ಮಂದಿರದ ಅಡಿಪಾಯದ ಕಾಮಗಾರಿ ಈ ತಿಂಗಳಿನಿಂದ ಪ್ರಾರಂಭವಾಗಲಿದ್ದು ಸಂಪೂರ್ಣ ದೇವಾಲಯವು ಸುಮಾರು ಮೂರುವರೆ ವರ್ಷದಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥದ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಜಿ ಮಹಾರಾಜ್ ಮಾಹಿತಿ ನೀಡಿದ್ದಾರೆ.
ಅಡಿಪಾಯವನ್ನ ಹೇಗೆ ನಿರ್ಮಿಸಬೇಕು ಅನ್ನೋದರ ಬಗ್ಗೆ ತೀರ್ಮಾನ ಮಾಡಲಾಗಿದೆ. ಉತ್ಖನನ ಪ್ರಾರಂಭವಾಗಿದೆ. ಆದರೆ ನಿಜವಾದ ಅಡಿಪಾಯ ಕಾರ್ಯ ಜನವರಿಯಲ್ಲೇ ಆರಂಭವಾಗುತ್ತೆ ಎಂದು ಹೇಳಿದ್ರು.
ಇದೇ ವೇಳೆ ಅಯೋಧ್ಯೆ ನಿರ್ಮಾಣ ಯೋಜನೆಯ ಒಟ್ಟು ವೆಚ್ಚದ ಬಗ್ಗೆ ಕೇಳಿದಾಗ, ಮುಖ್ಯ ದೇವಾಲಯದ ವೆಚ್ಚವು 300 ಕೋಟಿ ರೂಪಾಯಿಯಿಂದ 400 ಕೋಟಿ ರೂಪಾಯಿ ಇರಬೇಕು ಎಂದು ಅಂದಾಜಿಸಿದ್ರು.