ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳುವ ಮೊದಲು ನರೇಂದ್ರ ಮೋದಿ ಹನುಮಾನ್ ಗಡಿ ಮಂದಿರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಸಾಂಪ್ರದಾಯಿಕ ಪೂಜೆಯಲ್ಲಿ ಅವರು ಪಾಲ್ಗೊಂಡಿದ್ರು.
ಇಲ್ಲಿನ ಪ್ರಧಾನ ಅರ್ಚಕರು ಪೇಟ, ಬೆಳ್ಳಿ ಕಿರೀಟವನ್ನು ಪ್ರಧಾನಿ ಮೋದಿಯವರಿಗೆ ಧರಿಸಿದ್ದರು. ಈ ಸಮಯದಲ್ಲಿ, ಪಿಎಂ ಮಾಸ್ಕ್ ಮತ್ತು ಸಾಮಾಜಿಕ ಅಂತರದ ಬಗ್ಗೆ ಗಮನ ನೀಡಿದ್ದರು. ಅಯೋಧ್ಯೆ ಮಾರ್ಗದಲ್ಲಿ ರಾಮ ಭಕ್ತ ಹನುಮಂತನ ದೇವಸ್ಥಾನವಿದೆ. ಸಂಪ್ರದಾಯದಂತೆ ಮೊದಲು ಹನುಮಂತನ ದರ್ಶನ ಪಡೆದು ನಂತ್ರ ರಾಮ ಮಂದಿರಕ್ಕೆ ತೆರಳಬೇಕೆಂಬ ನಂಬಿಕೆಯಿದೆ.
ಹನುಮಂತನ ಅನುಗ್ರಹವಿಲ್ಲದೆ ಯಾರೂ ರಾಮನ ಆಶೀರ್ವಾದ ಪಡೆಯುವುದಿಲ್ಲ ಎನ್ನಲಾಗುತ್ತದೆ. ಹನುಮಂತನ ದರ್ಶನ ಪಡೆದ ಮೋದಿ ನಂತ್ರ ರಾಮ ಮಂದಿರಕ್ಕೆ ಬಂದರು. ಅಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಿದರು.