![](https://kannadadunia.com/wp-content/uploads/2020/08/rammandir.jpg)
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪ್ರಾರಂಭವಾಗಿದೆ. ಬುಧವಾರ ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಈ ಬಗ್ಗೆ ಮಾಹಿತಿ ನೀಡಿದೆ. ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದ್ದರು. ಈಗ ದೇವಾಲಯದ ನಿರ್ಮಾಣ ಕಾರ್ಯಗಳು ಪ್ರಾರಂಭವಾಗಿವೆ. ಖಾತೆ ಸಂಖ್ಯೆ ಮತ್ತು ಇತರ ಮಾಹಿತಿಯನ್ನು ಟ್ರಸ್ಟ್ ಬುಧವಾರ ಹಂಚಿಕೊಂಡಿದೆ.
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಬುಧವಾರ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಕೋಟ್ಯಂತರ ರಾಮ ಭಕ್ತರು ದೇವಾಲಯದ ನಿರ್ಮಾಣಕ್ಕೆ ಕೊಡುಗೆ ನೀಡಲು ಬಯಸುತ್ತಾರೆ. ಅವರ ಅನುಕೂಲಕ್ಕೆ ಟ್ರಸ್ಟ್ ಎಲ್ಲ ಮಾಹಿತಿ ನೀಡುತ್ತದೆ ಎಂದು ಚಂಪತ್ ರೈ ಹೇಳಿದ್ದಾರೆ.
ದೇವಾಲಯ 300 ಅಡಿ ಎತ್ತರದಲ್ಲಿರಲಿದೆ. ಮೂರು ಅಂತಸ್ಥಿನ ದೇವಾಲಯ ನಿರ್ಮಾಣವಾಗಲಿದೆ. ಮೂರು ಗುಮ್ಮಟದ ಬದಲು 5 ಗುಮ್ಮಟವಿರಲಿದೆ. ಪ್ರತಿ ಮಹಡಿಯಲ್ಲಿ 106 ಸ್ತಂಭಗಳಿರಲಿದೆ.
![](https://kannadadunia.com/wp-content/uploads/2020/08/efnh5glucaaxvum_081220021602-931x1024.jpg)