ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಳೆ ಮಧ್ಯಾಹ್ನ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಅಶುಭ ಮುಹೂರ್ತದಲ್ಲಿ ಭೂಮಿ ಪೂಜೆಗೆ ಸಮಯ ನಿಗದಿ ಮಾಡಲಾಗಿದೆ ಎನ್ನುವ ಆಕ್ಷೇಪ ಕೇಳಿ ಬಂದಿದ್ದವು. ಆದರೆ 12 ಗಂಟೆ 44 ನಿಮಿಷ 8 ಸೆಕೆಂಡ್ ನಿಂದ 12 ಗಂಟೆ 44 ನಿಮಿಷದ 40 ಸೆಕೆಂಡ್ ಗಳವರೆಗೆ 32 ಸೆಕೆಂಡ್ ಗಳ ಕಾಲ ಅಭಿಜಿತ್ ಮುಹೂರ್ತವಿದ್ದು ಇದೇ ಮುಹೂರ್ತದಲ್ಲೇ ಪ್ರಧಾನಿ ಮೋದಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಕರ್ನಾಟಕದ ಖ್ಯಾತ ವಿದ್ವಾಂಸರಾದ ವಿಜಯೇಂದ್ರ ಶರ್ಮಾ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಶ್ರೀರಾಮ ಇದೇ ಮುಹೂರ್ತದಲ್ಲಿ ಜನಿಸಿದ್ದರಿಂದ ಶ್ರೀರಾಮಮಂದಿರ ನಿರ್ಮಾಣಕ್ಕೆ ಇದೆ ಮುಹೂರ್ತವನ್ನು ನಿಗದಿ ಮಾಡಲಾಗಿದೆ. 32 ಸೆಕೆಂಡ್ ಗಳ ಶುಭ ಗಳಿಗೆಯಲ್ಲಿ ಪ್ರಧಾನಿ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಹೇಳಲಾಗಿದೆ.