ಬಿಜೆಪಿ ಸಂಸದರಾದ ಮನೋಜ್ ತಿವಾರಿ ಹಾಗೂ ರವಿ ಕಿಶನ್ ಭಾಗಿಯಾಗಲಿರುವ ’’ಅಯೋಧ್ಯಾ ಕೀ ರಾಮ್‌ಲೀಲಾ” 14 ವಿವಿಧ ಭಾಷೆಗಳಲ್ಲಿ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಉರ್ದು ಹಾಗೂ ಭೋಜ್ಪುರಿ ಭಾಷೆಗಳಲ್ಲೂ ಸಹ ’’ಅಯೋಧ್ಯಾ ಕೀ ರಾಮ್‌ಲೀಲಾ” ಬಿಡುಗಡೆಯಾಗಲಿದೆ. ರಾಮ ಮಂದಿರ ನಿರ್ಮಾಣವಾಗಲಿರುವ ಸ್ಥಳದಿಂದ ಕೆಲವೇ ಕಿಮೀ ದೂರ ಇರುವ, ಅಯೋಧ್ಯೆಯ ಸರಯೂ ನದಿ ತೀರದಲ್ಲಿರುವ ಲಕ್ಷ್ಮಣ ಕೋಟೆಯಲ್ಲಿ ಈ ನಾಟಕವನ್ನು ಆಯೋಜಿಸಲಾಗಿದೆ. ಈ ನಾಟಕದಲ್ಲಿ ಬಾಲಿವುಡ್‌ನ ಅನೇಕ ತಾರೆಯರೂ ಸಹ ಭಾಗಿಯಾಗಲಿದ್ದಾರಂತೆ.
ಅಕ್ಟೋಬ್ 17ರಿಂದ ಅಕ್ಟೋಬರ್ 25ರ ವರೆಗೂ ಕೆಲವೇ ಜನರ ಸಮ್ಮುಖದಲ್ಲಿ ಆಯೋಜನೆಗೊಳ್ಳಲಿರುವ ಈ ಕಾರ್ಯಕ್ರಮವನ್ನು ದೇಶಾದ್ಯಂತ ಟಿವಿ ವಾಹಿನಿಗಳಲ್ಲಿ ನೇರ ಪ್ರಸಾರ ಮಾಡಲಾಗುವುದು.