ಮಂಡ್ಸೂರ್, ಮಧ್ಯಪ್ರದೇಶ: ಈ ಕೋವಿಡ್-19 ನಿಂದ ಸುಮಾರು ಎರಡೂವರೆ ತಿಂಗಳು ದೇಶವೇ ಸ್ತಬ್ಧವಾಗಿತ್ತು. ಬಳಿಕ ಒಂದೊಂದಾಗಿಯೇ ಅನುಮತಿ ಕೊಟ್ಟು ಸಾರ್ವಜನಿಕ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿತ್ತು. ಇನ್ನು ಧಾರ್ಮಿಕ ಕೇಂದ್ರಗಳಿಗೂ ಷರತ್ತುಬದ್ಧ ಅನುಮತಿಯನ್ನು ಕೊಡಲಾಗಿದೆ. ಈ ನಿಟ್ಟಿನಲ್ಲಿ ಮಧ್ಯಪ್ರದೇಶದ ಮಂಡ್ಸೂರಿನಲ್ಲಿರುವ ಪಶುಪತಿನಾಥ ದೇಗುಲದಲ್ಲಿ ತೆಗೆದುಕೊಂಡ ಕ್ರಮ ಎಲ್ಲರನ್ನೂ ತಲೆದೂಗಿಸಿದೆ.
ಸಾಮಾಜಿಕ ಅಂತರದ ಜೊತೆ ಸೋಂಕಿತನೊಬ್ಬ ಮುಟ್ಟಿದ ಪ್ರದೇಶವನ್ನು ಮೊತ್ತೊಬ್ಬರು ಮುಟ್ಟಿದರೆ ಅವರಿಗೂ ಸೋಂಕು ತಗುಲುತ್ತದೆ. ಹೀಗಾಗಿ ದೇಗುಲಕ್ಕೆ ಬಂದವರು ಘಂಟೆಯನ್ನು ಬಾರಿಸಿಯೇ ಬಾರಿಸುತ್ತಾರೆ. ಹೀಗಾಗಿ ಅದನ್ನು ಮುಟ್ಟದಂತೆ ಮಾಡುವ ಆಲೋಚನೆ ಬಂದೊಡನೆ, ಅದಕ್ಕೊಂದು ಸೆನ್ಸಾರ್ ಅಳವಡಿಸಿ, ಕೈಯನ್ನು ಘಂಟೆ ಬಳಿ ತೇಲಿಸಿದರೆ ಸಾಕು ಘಂಟಾನಾದ ಮೊಳಗುತ್ತದೆ.
ನಹ್ರು ಖಾನ್ ಎಂಬುವರು ಈ ನೂತನ ಸೆನ್ಸಾರ್ ಅನ್ನು ಕಂಡುಹಿಡಿದಿದ್ದು, ಕೈಯಲ್ಲಿ ಮುಟ್ಟದೇ ಘಂಟಾನಾದ ಮೊಳಗಿಸುವ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ಭಕ್ತರಿಂದಲೂ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ನಾವು ಪ್ರಾರ್ಥನೆ ಮಾಡುವಾಗ ಘಂಟೆಯನ್ನು ಮುಟ್ಟದೆಯೇ ನಾದ ಮೊಳಗುವಂತೆ ಮಾಡಿರುವುದು ತುಂಬಾ ಸಹಾಯಕವಾಗಿದೆ. ಜೊತೆಗೆ ಕೊರೋನಾ ಭಯವನ್ನೂ ಹೋಗಲಾಡಿಸಿದೆ ಎಂದು ಭಕ್ತನೊಬ್ಬ ಹೇಳಿದ್ದಾನೆ.