ಮನಾಲಿ: ವಿಶ್ವದ ಅತಿ ಉದ್ದದ ಮಾರ್ಗ ಅಟಲ್ ಸುರಂಗ ಮಾರ್ಗ ಉದ್ಘಾಟನೆಯಾದ 24 ಗಂಟೆಯಲ್ಲಿ ಮೂರು ಅಪಘಾತ ಸಂಭವಿಸಿವೆ.
ಹಿಮಾಚಲ ಪ್ರದೇಶದ ರೋಹ್ಟಂಗ್ ಪಾಸ್ ಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ 24 ಗಂಟೆಯಲ್ಲಿ ಮೂರು ಅಪಘಾತ ಸಂಭವಿಸಿದೆ. ಅಟಲ್ ಸುರಂಗದ ನಿರ್ಗಮನ ಮತ್ತು ಪ್ರವೇಶದ್ವಾರದ ಬಳಿ ವಾಹನ ಸವಾರರು ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಿದ್ದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದ್ದು ಇದಾದ ನಂತರದಲ್ಲಿ ಸಂಚಾರ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಅಕ್ಟೋಬರ್ 3 ರಂದು ಶನಿವಾರ ಪ್ರಧಾನಿ ಮೋದಿ 9.02 ಕಿಲೋಮೀಟರ್ ಉದ್ದದ ಸುರಂಗ ಮಾರ್ಗವನ್ನು ಉದ್ಘಾಟಿಸಿದ್ದಾರೆ. ಈ ಮಾರ್ಗದಲ್ಲಿ ಓವರ್ ಟೇಕ್ ನಿಷೇಧಿಸಿದ್ದು, 80 ಕಿಲೋಮೀಟರ್ ವೇಗದ ಮಿತಿ ನಿಗದಿಪಡಿಸಲಾಗಿದೆ.