ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಮೈಲಿಗಲನ್ನ ದಾಟಿದೆ. ದೇಶದಲ್ಲಿ ಕೋವಿಡ್ 19 ಚೇತರಿಕೆ ಪ್ರಮಾಣವು ಶೇಕಡಾ 96ರಷ್ಟನ್ನ ದಾಟಿದೆ.
ಇದು ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚಿನ ಚೇತರಿಕೆ ಪ್ರಮಾಣವಾಗಿದೆ ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳು 2.57 ಲಕ್ಷಕ್ಕೆ ಇಳಿದಿದೆ. ದೇಶದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳು 2,57,656 ಗಡಿ ತಲುಪಿದೆ.
ಪ್ರತಿದಿನ ಕೊರೊನಾ ರೋಗಿಗಳು ಚೇತರಿಸಿಕೊಳ್ಳುತ್ತಿರೋದ್ರಿಂದ ಹಾಗೂ ಮರಣ ಪ್ರಮಾಣ ಇಳಿಮುಖವಾಗ್ತಿರೋದ್ರಿಂದ ಭಾರತ ಕೊರೊನಾ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸಿದೆ ಅನ್ನೋದು ತಿಳಿದುಬರುತ್ತೆ ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.