alex Certify ಪ್ರಶ್ನೆ ನೀವೇ ಸೆಟ್ ಮಾಡಿಕೊಂಡು, ಉತ್ತರ ಬರೆಯಿರಿ ಎಂದ ಐಐಟಿ ಗೋವಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಶ್ನೆ ನೀವೇ ಸೆಟ್ ಮಾಡಿಕೊಂಡು, ಉತ್ತರ ಬರೆಯಿರಿ ಎಂದ ಐಐಟಿ ಗೋವಾ…!

ತನ್ನ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಂದರ್ಭದಲ್ಲಿ ಖುದ್ದು ತಾವೇ ಪ್ರಶ್ನೆಗಳನ್ನು ರಚಿಸಿಕೊಳ್ಳಲು ಪ್ರಶ್ನೆಪತ್ರಿಕೆಯಲ್ಲಿ ಕೇಳಿರುವ ಐಐಟಿ-ಗೋವಾ ಆನ್ಲೈನ್‌ನಲ್ಲಿ ಭಾರೀ ಚರ್ಚೆಗೆ ವಿಚಾರವಾಗಿದೆ.

70 ಅಂಕಗಳ ಈ ಪ್ರಶ್ನೆಪತ್ರಿಕೆಯಲ್ಲಿ ಎರಡು ಪ್ರಶ್ನೆಗಳಿದ್ದವು — 40 ಅಂಕಗಳಿಗೆ ಮೊದಲ ಪ್ರಶ್ನೆಯಾಗಿ, ತಮಗೆ ನೀಡಲಾದ ಲೆಕ್ಚರ್‌ ಪರಿಕರಗಳನ್ನು ಬಳಸಿಕೊಂಡು ಪ್ರಶ್ನೆಗಳನ್ನು ಸೆಟ್ ಮಾಡಲು ಕೇಳಲಾಗಿದೆ.

ಈ ಮೂಲಕ ವಿದ್ಯಾರ್ಥಿಯು ತನ್ನ ಕೋರ್ಸ್‌ನ ಸಿಲಬಸ್‌ ಅನ್ನು ಯಾವ ಮಟ್ಟಕ್ಕೆ ಅರ್ಥ ಮಾಡಿಕೊಂಡಿದ್ದಾನೆ ಎಂದು ಎರಡು ಗಂಟೆಯಲ್ಲಿ ಅಳೆಯಲು ಪ್ರಶ್ನೆಪತ್ರಿಕೆ ತಯಾರಕರು ಉದ್ದೇಶಿಸಿದ್ದಾರೆ.

ಬರೋಬ್ಬರಿ 17 ದಿನಗಳ ಕಾಲ ದಟ್ಟಾರಣ್ಯದಲ್ಲಿದ್ದು ಸೇಫ್​ ಆಗಿ ಹಿಂತಿರುಗಿದ ವೃದ್ಧ..!

ಎರಡನೇ ಪ್ರಶ್ನೆಯಾಗಿ, 30 ಅಂಕಗಳಿಗೆ, ಖುದ್ದು ತಾವೇ ಸೆಟ್ ಮಾಡಿದ ಪ್ರಶ್ನೆಗೆ ಉತ್ತರಿಸಲು ವಿದ್ಯಾರ್ಥಿಗಳಿಗೆ ಕೇಳಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ

“ನಿಮ್ಮ ಸ್ನೇಹಿತರೊಂದಿಗೆ ಚರ್ಚೆ ಮಾಡಬೇಡಿ. ಇದರಿಂದಾಗಿ ನಿಮ್ಮ ಪ್ರತಿಕ್ರಿಯೆಗಳಲ್ಲಿ ಸಾಮ್ಯತೆ ಕಂಡುಬಂದಲ್ಲಿ ಅಂಕಗಳ ಕಡಿತವಾಗಬಹುದು” ಎಂದು ದ್ವಿತೀಯ ವರ್ಷದ ಎಲೆಕ್ಟ್ರಿಕ್ ಇಂಜಿನಿಯರಿಂಗ್‌ ವಿಭಾಗದ ಮೇ 11ರ ಪ್ರಶ್ನೆಪತ್ರಿಕೆಯಲ್ಲಿ ಸೂಚನೆಗಳನ್ನು ಕೊಡಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...