ಕೇಂದ್ರ ಸರ್ಕಾರ ಜಾರಿ ಮಾಡಿದ ರೈತ ಕಾನೂನುಗಳನ್ನು ವಿರೋಧಿಸಿ ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಇನ್ನಷ್ಟು ದೀರ್ಘ ಕಾಲ ಹೋರಾಟ ನಡೆಯುವ ಸಾಧ್ಯತೆಯೂ ಇದೆ.
ಹೀಗಾಗಿ ಸುದೀರ್ಘ ಅವಧಿಗೆ ಪ್ರತಿಭಟನಾಕಾರರನ್ನು ರಕ್ಷಿಸಲು ಹವಾನಿಯಂತ್ರಿತ ಟ್ರ್ಯಾಲಿಗಳು ಮತ್ತು ಇಟ್ಟಿಗೆ ಗಾರೆಯನ್ನು ಒಳಗೊಂಡ ಮನೆ ನಿರ್ಮಿಸುವ ಯೋಜನೆ ರೂಪಿಸಲಾಗುತ್ತಿದೆ.
ಕೃಷಿ ಸಂಸ್ಥೆ ಡಿಕೆ ದೋಹದ ಹೋಶಿಯಾರ್ಪುರ್ ಘಟಕ ಈ ಪ್ರಯತ್ನ ಮಾಡುತ್ತಿದ್ದು, ಬುಧವಾರ ಪ್ರತಿಭಟನಾ ಸಮೀಪದ ಸರ್ಕಾರಿ ಜಾಗದಲ್ಲಿ ಮನೆ ಕೆಲಸ ಆರಂಭವಾಗಿದೆ.
ತಪ್ಪು ತಿಳುವಳಿಕೆಯಿಂದ ಹೋಟೆಲ್ ಸಿಬ್ಬಂದಿಯನ್ನ ತಬ್ಬಿಕೊಂಡ ಯುವತಿ..! ವೈರಲ್ ಆಯ್ತು ವಿಡಿಯೋ
60×20 ಅಳತೆಯ ಮನೆ ನಿರ್ಮಿಸಲಾಗುತ್ತಿದ್ದು, ನೆಲಮಹಡಿಯಲ್ಲಿ ಮೂರು ಕೊಠಡಿಗಳು ಮತ್ತು ಮೊದಲ ಮಹಡಿಯಲ್ಲಿ ಒಂದು ವಿಶಾಲ ಹಾಲ್ ಹೊಂದಿದೆ. ಮಹಡಿಗೆ ಕಾಂಕ್ರೀಟ್ ಬಳಸುವ ಬದಲು ಕಬ್ಬಿಣ ಮತ್ತು ಮರವನ್ನು ಉಪಯೋಗಿಸಲಾಗಿದೆ.
ಹಾಗೆ ಈ ಮನೆಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಕೋರಲಾಗಿದೆ, ಒಂದು ವೇಳೆ ಸಂಪರ್ಕ ನೀಡದಿದ್ದರೆ ಜನರೇಟರ್ ಬಳಸಲು ಸಹ ನಿರ್ಧರಿಸಿದ್ದಾರೆ. ಈ ಮನೆ ಚಳಿಯ ರಾತ್ರಿ ಮತ್ತು ಬೇಸಿಗೆಯಲ್ಲಿ ಪ್ರತಿಭಟನಾಕಾರರನ್ನು ರಕ್ಷಿಸಲಿದೆ ಎಂದು ಸಂಘಟಕರು ಹೇಳಿದ್ದಾರೆ.