ಇಂಜಿನಿಯರಿಂಗ್ ಕೋರ್ಸ್‌ಗೆ ಪ್ರವೇಶ ಗಿಟ್ಟಿಸಲೆಂದು ಗೇಟ್ ಪರೀಕ್ಷೆ ಬರೆದ 67 ವರ್ಷದ ಶಂಕರನಾರಾಯಣ್ ಶಂಕರಪಾಂಡಿಯನ್, ಈ ಪರೀಕ್ಷೆ ಪಾಸ್ ಮಾಡಿದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.
ತಮ್ಮ ಅನುಭವದ ಕುರಿತು ಮಾತನಾಡಿದ ಶಂಕರಪಾಂಡಿಯನ್, “ಪರೀಕ್ಷಾ ಕೇಂದ್ರದಲ್ಲಿನ ಸಿಬ್ಬಂದಿ ನನ್ನನ್ನ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಯೊಬ್ಬರ ತಂದೆ ಎಂದು ಭಾವಿಸಿ, ಪೋಷಕರಿಗೆಂದು ಇರುವ ನಿರೀಕ್ಷಣಾ ಪ್ರದೇಶದತ್ತ ಹೋಗಲು ಹೇಳಿದ್ದರು” ಎಂದು ಮಾಧ್ಯಮವೊಂದಕ್ಕೆ ಕೊಟ್ಟ ಸಂದರ್ಶನದ ವೇಳೆ ತಿಳಿಸಿದ್ದಾರೆ.
ತಮಿಳುನಾಡಿನ ಹಿಂದೂ ಕಾಲೇಜಿನ ನಿವೃತ್ತ ಶಿಕ್ಷಕರಾದ ಶಂಕರಪಾಂಡಿಯನ್, ಎರಡು ವಿಷಯಗಳಲ್ಲಿ ಪರೀಕ್ಷೆ ತೆಗೆದುಕೊಂಡಿದ್ದರು. ಗಣಿತದಲ್ಲಿ 338 ಹಾಗೂ ಗಣಕ ವಿಜ್ಞಾನದಲ್ಲಿ 482 ಅಂಕ ಗಳಿಸಿದ್ದಾರೆ ಶಂಕರಪಾಂಡಿಯನ್.
ಈ ದೇವಸ್ಥಾನ ನಿರ್ಮಾಣವಾಗಿರೋದು ಹೇಗೆ ಎಂದು ತಿಳಿದ್ರೆ ಬೆರಗಾಗ್ತೀರಾ……!
ಗೇಟ್ ಪರೀಕ್ಷೆ ಬರೆಯಲು ವಯಸ್ಸಿನ ಮಿತಿ ಇಲ್ಲ. ಸಾಮಾನ್ಯವಾಗಿ 20-30ರ ಆಸುಪಾಸಿನ ವಯೋಮಾನದ ಯುವಕರು ಎಂಟೆಕ್ ಕೋರ್ಸ್‌ಗೆ ಪ್ರವೇಶ ಪಡೆಯಲು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಲು ಬರೆಯುತ್ತಿದ್ದರು. ಆದರೆ ಶಂಕರಪಾಂಡಿಯನ್‌ಗೆ ಈ ಯಾವ ಉದ್ದೇಶವೂ ಇಲ್ಲ.
ಎರಡು ದಶಕಗಳ ಕಾಲ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಟ್ಟ ಬಳಿಕ ವರ್ಚುವಲ್ ರಿಯಾಲಿಟಿ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ಶಂಕರಪಾಂಡಿಯನ್ ಮುಂದಾಗಿದ್ದಾರೆ.