alex Certify ಗ್ರಹಣ ಕುರಿತ ʼಲೈವ್ʼ‌ ಕಾರ್ಯಕ್ರಮದ‌ಲ್ಲೇ ಆಹಾರ ಸೇವಿಸಿದ ವಿಜ್ಞಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಹಣ ಕುರಿತ ʼಲೈವ್ʼ‌ ಕಾರ್ಯಕ್ರಮದ‌ಲ್ಲೇ ಆಹಾರ ಸೇವಿಸಿದ ವಿಜ್ಞಾನಿ

Astrologer Says Avoid Food During Solar Eclipse, Scientist Quashes ...

ಭಾನುವಾರವಷ್ಟೇ ಇಡೀ ಜಗತ್ತು ಕಂಕಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿದೆ. ಗ್ರಹಣದ ಮಜಲುಗಳನ್ನು ನೋಡುವುದಕ್ಕಿಂತ, ಆ ಅವಧಿಯಲ್ಲಿ ಏನು ಮಾಡಬೇಕು? ಮಾಡಬಾರದು ಎನ್ನುವ ಚರ್ಚೆಗಳು ಭಾರತದಲ್ಲಿ ಜೋರಾಗಿವೆ ನಡೆದಿದೆ.

ಆದರೆ ಈ ರೀತಿ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ವಿಜ್ಞಾನಿಯೊಬ್ಬರು‌ ಗ್ರಹಣದ ಅವಧಿಯಲ್ಲಿ ಆಹಾರ ಸೇವಿಸಿದರೆ ಯಾವ ಸಮಸ್ಯೆಯಾಗುವುದಿಲ್ಲ ಎಂದು ಸಾಬೀತುಪಡಿಸಲು ಲೈವ್ ‌ನಲ್ಲಿರುವಾಗಲೇ ಆಹಾರ ಸೇವಿಸಿರುವ ವಿಡಿಯೋ ವೈರಲ್ ಆಗಿದೆ.

ಉರ್ದು ಸಾಹಿತಿ ಹಾಗೂ ವಿಜ್ಞಾನಿ ಗೌಹಾರ್ ರಾಜಾ ಅವರು ಈ ರೀತಿ ಆಹಾರ ಸೇವಿಸುವುದಕ್ಕೆ ಕಾರಣವೆಂದರೆ, ಗ್ರಹಣದ ಫಲಾಫಲದ ಪ್ಯಾನಲ್ ಡಿಸ್ಕಷನ್ ನಡೆಯುವ ವೇಳೆ, ಗ್ರಹಣದ ಅವಧಿಯಲ್ಲಿ ಆಹಾರ ಸೇವಿಸಬಾರದು ಎಂದು ಕೆಲ ಜ್ಯೋತಿಷಿಗಳು ವಾದಿಸುತ್ತಿದ್ದರು. ಇದನ್ನು ವಿರೋಧಿಸಲು ರಾಜಾ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆದ್ದರಿಂದ ಈ ರೀತಿ ಮಾಡಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗಿದೆ.

https://www.facebook.com/devanhad181/videos/10218188757372395/?t=4

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...