ವಾಹನಗಳಿಂದ ಸಾವು ಸಂಭವಿಸಿದರೆ ವಾಹನ ಚಾಲಕರನ್ನು ಬಂಧಿಸೋದನ್ನು ನೋಡಿದ್ದೇವೆ. ಆದರೆ ವಾಹನಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸೋದನ್ನು ನೋಡಿರುವುದು ತೀರಾ ಅಂದರೆ ತೀರಾ ಕಡಿಮೆ. ಇದೀಗ ಇಂತಹದ್ದೇ ಘಟನೆಯೊಂದು ಅಸ್ಸಾಂನಲ್ಲಿ ನಡೆದಿದೆ.
ಹೌದು, ಅಸ್ಸಾಂನ ಪಥಾರ್ಖುಲಾ ಮತ್ತು ಲಾಮ್ಸಾಖಾಂಗ್ ನಡುವಿನ ರೈಲ್ವೆ ಹಳಿಯಲ್ಲಿ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಹೆಣ್ಣು ಆನೆ ಹಾಗೂ ಅದರ ಮರಿಯಾನೆ ಸಾವನ್ನಪ್ಪಿದ್ದವು. ಎರಡು ಆನೆಗಳನ್ನು ಕೊಂದಿದ್ದಾರೆ ಎಂಬ ಆರೋಪದಡಿ ಅಪಘಾತ ಮಾಡಿದ್ದ ರೈಲ್ವೆ ಇಂಜಿನ್‌ಗಳನ್ನು ಗುವಾಹಟಿಯ ಬಮುನಿಮೈದನ್ ರೈಲ್ವೆ ನಿಲ್ದಾಣದಿಂದ ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡಿದ್ದ ಎರಡು ಇಂಜಿನ್‌ಗಳನ್ನು ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ನಿರ್ವಹಿಸಲು ಬಳಲಾಗುತ್ತಿದೆ. ಇನ್ನು ರೈಲ್ವೇ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಒಟ್ನಲ್ಲಿ ಅಪರೂಪದಲ್ಲಿ ತೀರಾ ಅಪರೂಪವಾದ ಈ ಪ್ರಕರಣ ನೋಡುಗರಿಗೆ ಅಚ್ಚರಿಯನ್ನು ಮೂಡಿಸಿದೆ.