ಪಿಪಿಇ ಕಿಟ್ ಧರಿಸಿ ನೃತ್ಯ ಮಾಡಿದ ವೈದ್ಯ 20-10-2020 7:29AM IST / No Comments / Posted In: Corona, Corona Virus News, Latest News, India ಕೊರೊನಾ ವಿರುದ್ಧ ಜೀವದ ಹಂಗು ತೊರೆದು ಹೋರಾಡುತ್ತಿರೋ ವೈದ್ಯರ ಕರ್ತವ್ಯ ನಿಷ್ಠೆಗೆ ಎಷ್ಟು ಸಲಾಂ ಹೇಳಿದರೂ ಕೂಡ ಕಡಿಮೆಯೇ. ಚಿಕಿತ್ಸೆ ನೀಡಿ ಜನರ ಪ್ರಾಣ ಕಾಪಾಡೋದ್ರ ಜೊತೆ ಜೊತೆಗೆ ಆಸ್ಸಾಂನ ವೈದ್ಯರೊಬ್ಬರು ನೃತ್ಯ ಮಾಡುವ ಮೂಲಕ ರೋಗಿಗಳನ್ನ ರಂಜಿಸಿದ್ದಾರೆ. ಡಾ. ಸೈಯದ್ ಅಹಮದ್ ಎಂಬವರು ಶೇರ್ ಮಾಡಿರುವ ವಿಡಿಯೋದಲ್ಲಿ ಪಿಪಿಇ ಕಿಟ್ ಹಾಕಿದ ವೈದ್ಯ ಅನುಪ್ ಸೇನಾಪತಿ ವಾರ್ ಸಿನಿಮಾದ ಹಾಡಿಗೆ ಗುಂಗ್ರೂ ಡ್ಯಾನ್ಸ್ ಮಾಡಿ ಕೊರೊನಾ ರೋಗಿಗಳನ್ನ ಚಿಯರ್ ಅಪ್ ಮಾಡಿದ್ದಾರೆ. ಈ ರೀತಿ ಪಿಪಿಇ ಕಿಟ್ ಹಾಕಿ ವೈದ್ಯರು ನೃತ್ಯ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಡಾ. ರಿಚಾ ನೇಗಿ ಎಂಬವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಟ್ರೀಟ್ ಡ್ಯಾನ್ಸರ್ ಫಿಲಂನ ಹಾಡೊಂದಕ್ಕೆ ನೃತ್ಯ ಮಾಡ್ತಿರೋ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದರು. ಡಾ. ಅನೂಪ್ ಸೇನಾಪತಿ ನೃತ್ಯ ಮಾಡಿರೋ ಈ ವಿಡಿಯೋ ಈಗಾಗಲೇ ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ ಹಾಗೂ 2400 ಮಂದಿ ಈ ವಿಡಿಯೋಗೆ ಕಮೆಂಟ್ ಮತ್ತು 11300 ಮಂದಿ ಲೈಕ್ ಕೊಟ್ಟಿದ್ದಾರೆ. Meet my #COVID duty colleague Dr Arup Senapati an ENT surgeon at Silchar medical college Assam .Dancing infront of COVID patients to make them feel happy #COVID19 #Assam pic.twitter.com/rhviYPISwO — Dr Syed Faizan Ahmad (@drsfaizanahmad) October 18, 2020