ದೇಶಾದ್ಯಂತ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇರುವ ಕಾರಣದಿಂದ ಮುಂಬರುವ ಹಬ್ಬದ ಮಾಸಕ್ಕೆ ಸರ್ಕಾರ ಕೆಲವೊಂದು ನಿಯಮಾವಳಿಗಳನ್ನು ತರಲು ಮುಂದಾಗಿವೆ.
ಹಬ್ಬ ಹರಿದಿನಗಳಲ್ಲಿ ಜನರು ಒಂದೆಡೆ ಸೇರುವ ಸಾಧ್ಯತೆಗಳು ಹೆಚ್ಚಿರುವ ಕಾರಣ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುವ ಸಾಧ್ಯತೆಗಳು ಹೆಚ್ಚಿವೆ. ಈ ಕಾರಣದಿಂದ ಕೇಂದ್ರ ಆರೋಗ್ಯ ಮಂತ್ರಾಲಯವು ಶೀಘ್ರದಲ್ಲೇ ವಿಶೇಷ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಸಂಸತ್ತು ಹಾಗೂ ವಿಧಾನ ಸಭಾ ಕಲಾಪಗಳ ನಡುವೆ ಜನಪ್ರತಿನಿಧಿಗಳು ಹೇಗೆಲ್ಲಾ ವರ್ತಿಸುವ ಮೂಲಕ ಸೋಂಕಿನ ಹಬ್ಬುವಿಕೆಯನ್ನು ನಿಯಂತ್ರಣಕ್ಕೆ ತರಬಹುದು ಎಂಬ ವಿಚಾರವಾಗಿ SOPಗಳನ್ನು ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಹರ್ಷ್‌ವರ್ಧನ್ ತಿಳಿಸಿದ್ದಾರೆ.