
ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಪರಿಸರ ಪ್ರೇಮಿಗಳು ತ್ಯಾಜ್ಯಗಳನ್ನ ಬಳಸಿ ಉಪಯುಕ್ತ ವಸ್ತುಗಳನ್ನ ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹದ್ದೇ ಒಂದು ಪ್ರಯತ್ನದಲ್ಲಿ ಊಟಿ ಸ್ಥಳೀಯ ಆಡಳಿತ ಪಾಳು ಬಿದ್ದಿದ್ದ ಶೌಚಾಲಯದ ಕಟ್ಟಡವನ್ನ ಆರ್ಟ್ ಗ್ಯಾಲರಿಯನ್ನಾಗಿ ಪರಿವರ್ತಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಈ ವಿಶೇಷವಾದ ಆರ್ಟ್ ಗ್ಯಾಲರಿ ಪುಟಾಣಿ ವಿಡಿಯೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಪುರಸಭೆ ವತಿಯಿಂದ ನಿರ್ಮಾಣವಾಗಿದ್ದ ಈ ಶೌಚಾಲಯ ಪಾಳು ಬಿದ್ದಿದ್ದು ಇದನ್ನೀಗ ಆರ್ಟ್ ಗ್ಯಾಲರಿಯಾಗಿ ಬದಲಾಯಿಸಲಾಗಿದೆ ಅಂತಾ ಮಾಹಿತಿ ನೀಡಿದ್ದಾರೆ.
2018ರಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತವಾದ ಈ ಆರ್ಟ್ ಗ್ಯಾಲರಿ ಮಾಧವನ್ ಪಿಳ್ಳೈ, ಶೋಭನಾ ಚಂದ್ರಶೇಖರ್ ಹಾಗೂ ಅನಿತಾ ನಂಜಪ್ಪರ ಕನಸಿನ ಕೂಸಾಗಿತ್ತು. ಇದು ಆರ್ಟ್ ಗ್ಯಾಲರಿಯ ಜೊತೆ ಜೊತೆಗೆ ಸ್ಥಳೀಯರ ಪಾಲಿನ ಗ್ರಂಥಾಲಯವೂ ಹೌದು. ಕಟ್ಟಡದ ಹೊರಭಾಗಕ್ಕೆ ಗಾಢ ಹಳದಿ ಬಣ್ಣ ಬಳಿಯಲಾಗಿದೆ. ಹಾಗೂ ಒಳ ಭಾಗದಲ್ಲಿ ಹಿತವಾದ ತಿಳಿ ನೀಲಿ ಬಣ್ಣದಿಂದ ಅಲಂಕರಿಸಲಾಗಿದೆ.