ಪಾಕಿಸ್ತಾನದ ಜನರ ವಿರುದ್ಧ ದ್ವೇಷ ಬಿತ್ತುವ ಕಾರ್ಯ ಮಾಡಿದೆ ಎಂಬ ಆರೋಪದಡಿಯಲ್ಲಿ ಬ್ರಿಟನ್ನಲ್ಲಿ ಅರ್ನಬ್ ಗೋಸ್ವಾಮಿ ಮಾಲೀಕತ್ವದ ರಿಪಬ್ಲಿಕ್ ಭಾರತ್ಗೆ ಬರೋಬ್ಬರಿ 19,79,327.32 ರೂಪಾಯಿ ದಂಡ ವಿಧಿಸಲಾಗಿದೆ. ಯುಕೆ ಪ್ರಸಾರ ನಿಯಂತ್ರಕರು ಈ ದಂಡವನ್ನ ವಿಧಿಸಿದ್ದಾರೆ.
ರಿಪಬ್ಲಿಕ್ ಭಾರತ್ ಲೈಸೆನ್ಸ್ ಹೊಂದಿರುವ ವರ್ಲ್ಡ್ ವೀವ್ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ಗೆ ಮಂಗಳವಾರ ಆಫ್ಕಾಮ್ 20 ಲಕ್ಷ ರೂಪಾಯಿ ದಂಡ ವಿಧಿಸಿದೆ. ಬ್ರಿಟನ್ನಲ್ಲಿರುವ ಹಿಂದಿ ಮಾತನಾಡುವ ಜನರನ್ನ ಗುರಿಯಾಗಿಸಿ ದ್ವೇಷದ ಬೀಜ ಬಿತ್ತುವ ಮೂಲಕ ಆಫ್ಕಾಮ್ ಬ್ರಾಡ್ಕಾಸ್ಟಿಂಗ್ ಕೋಡ್ ನಿಯಮಗಳನ್ನ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅರ್ನಬ್ ಗೋಸ್ವಾಮಿ ನಿರೂಪಣೆ ಮಾಡಿದ ‘ಪೂಚತಾ ಹೈ ಭಾರತ್’ ಎಂಬ ಕಾರ್ಯಕ್ರಮದ 6 ಸೆಪ್ಟೆಂಬರ್ 2019ರ ವರದಿಯನ್ನ ಆಧರಿಸಿ ಈ ದಂಡವನ್ನ ವಿಧಿಸಲಾಗಿದೆ. ಇದು ಪಾಕಿಸ್ತಾನದ ಜನರ ಮೇಲೆ ನಡೆದ ನಿರಂತರ ಹಾಗೂ ಪುನರಾರ್ತಿತ ದಾಳಿ ಎಂದು ಆಫ್ಕಾಮ್ ಹೇಳಿದೆ.