
ತಮಿಳುನಾಡಿನ ವೇಲು ಎಂಬ ಸೇನಾ ಕ್ರೀಡಾಪಟು ವಿಶಿಷ್ಟ ಸಾಧನೆಗೆ ತೊಡಗಿಕೊಂಡಿದ್ದಾರೆ. ಈತ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 50 ದಿನಗಳಲ್ಲಿ ಐದು ಸಾವಿರ ಕಿಲೋಮೀಟರ್ ಓಟದ ಗುರಿ ಹೊಂದಿದ್ದಾರೆ.
ಈಗಾಗಲೇ ಅವರ ಓಟ ಆರಂಭವಾಗಿದೆ. ಭಾರತೀಯ ಸೇನಾ ಸಿಬ್ಬಂದಿ ಅವರಿಗೆ ಶುಭ ಹಾರೈಸಿ ಕಳಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ನಿರಾಶ್ರಿತನ ಮಾನವೀಯತೆಗೆ ಮಾರುಹೋದ ನೆಟ್ಟಿಗರು
ವೇಲು ಮುಂದಿನ 50 ದಿನಗಳಲ್ಲಿ ದೆಹಲಿ, ಇಂದೋರ್, ಮುಂಬೈ, ಮತ್ತು ಬೆಂಗಳೂರು ಮೂಲಕ ಕನ್ಯಾಕುಮಾರಿ ತಲುಪಲು ಬಯಸಿದ್ದಾರೆ.
ಓಟದ ಆರಂಭದಲ್ಲಿ ತಮ್ಮ ಉದ್ದೇಶ ವ್ಯಕ್ತಪಡಿಸಿರುವ ಅವರು, ನನಗೆ ಎರಡು ಧ್ಯೇಯವಾಕ್ಯಗಳಿವೆ. ಒಂದು ‘ಗ್ರೀನ್ ಇಂಡಿಯಾ’ ಮತ್ತು ಇನ್ನೊಂದು’ ಒನ್ ನೇಷನ್ ಒನ್ ಸ್ಪಿರಿಟ್ ‘ಎಂದು ತಿಳಿಸಿದ್ದಾರೆ.
ವೇಲು ಶಾಲೆಯಲ್ಲಿದ್ದಾಗ ಮ್ಯಾರಥಾನ್ ಓಡಲು ಪ್ರಾರಂಭಿಸಿದರು. ಬಳಿಕ ಭಾರತೀಯ ಸೈನ್ಯಕ್ಕೆ ಸೇರಿ ಅನೇಕ ಮ್ಯಾರಥಾನ್‌ಗಳಲ್ಲಿ ಪ್ರತಿನಿಧಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.