
ನವದೆಹಲಿ: “ನಿಮಗೆ ನಿಜವಾಗಿಯೂ ವಯಸ್ಸಾಗಿದೆಯಾ..?” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಟ ಮಿಲಿಂದ್ ಸೋಮನ್ ಅವರನ್ನು ಫಿಟ್ ಇಂಡಿಯಾ ಮಾತುಕತೆ ವೇಳೆ ಪ್ರಶ್ನಿಸಿದ್ದಾರೆ. ಫಿಟ್ ಇಂಡಿಯಾ ಮೂಮೆಂಟ್ ನ ಮೊದಲ ವರ್ಷಾಚರಣೆ ಅಂಗವಾಗಿ ಅವರು ಕ್ರಿಕೆಟಿಗ ವಿರಾಟ್ ಕೊಹ್ಲಿ ಸೇರಿ ಹಲವು ಫಿಟ್ ನೆಸ್ ತಜ್ಞರನ್ನು ನಟರ ಜತೆ ಗುರುವಾರ ಮಾತುಕತೆ ನಡೆಸಿದರು.
55 ವರ್ಷದ ಮಿಲಿಂದ್ ಸೋಮನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳಿಗೆ ಫಿಟ್ ನೆಸ್ ಕುರಿತು ಓಪನ್ ಟಾಸ್ಕ್ ನೀಡುತ್ತಾರೆ. ಅವರ 81 ವರ್ಷದ ತಾಯಿಯೂ ಫಿಟ್ ನೆಸ್ ಐಕಾನ್ ಆಗಿದ್ದಾರೆ.
ಸೋಮನ್ ಅವರು ಮೋದಿ ಅವರಿಂದ ಪ್ರಶಂಸೆಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಏಕೆಂದರೆ ಅವರು 500 ಕಿಮೀಯಷ್ಟು ಮ್ಯಾರಾಥಾನ್ ಮಾಡಿದ್ದಾರೆ. ಅವರಿಗೆ ಸೋಮನ್ ಫಿಟ್ ನೆಸ್ ವಿಚಾರದಲ್ಲಿ ಸ್ಫೂರ್ತಿಯಾಗಿದ್ದಾರೆ.