alex Certify ತಲೆ ಬೋಳಾಗಿಬಿಟ್ಟರೆ: ಕ್ಷೌರಿಕನಿಗೆ ಮಗುವಿನ ಮುಗ್ಧ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ಬೋಳಾಗಿಬಿಟ್ಟರೆ: ಕ್ಷೌರಿಕನಿಗೆ ಮಗುವಿನ ಮುಗ್ಧ ಪ್ರಶ್ನೆ

ಮಕ್ಕಳಿಗೆ ತಲೆಕೂದಲು ಕತ್ತರಿಸುವುದು ಒಂದು ಸಾಹಸವೇ ಸರಿ. ಅದರಲ್ಲೂ ಸಲೂನ್ ಗೆ ಕರೆದೊಯ್ದರೆ ಮಕ್ಕಳ ಮನಸ್ಥಿತಿಯೇ ಬದಲಾಗಿರುತ್ತದೆ. ಅವುಗಳ ಮನವೊಲಿಸಿ ಕುರ್ಚಿಯ ಮೇಲೆ ಕೂರಿಸುವುದೇ ಹರಸಾಹಸ.

ಈ ಹಿಂದೆ ಮಗ ಅನುಶ್ರುತ್ ನ ಹೇರ್ ಕಟ್ ವಿಡಿಯೋ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ತಂದೆ ಅನೂಪ್ ಪೇಟ್ಕರ್, ಮತ್ತೊಂದು ಹೊಸ ವಿಡಿಯೋದೊಂದಿಗೆ ಬಂದಿದ್ದಾರೆ.

ಅನುಶ್ರುತ್ ನನ್ನು ಮಾತನಾಡಿಸುತ್ತಾ ಹೇರ್ ಕಟ್ ಮಾಡುವಾತ, ಮಗುವಿನ ಗಮನವನ್ನು ತನ್ನತ್ತ ಹಿಡಿದುಕೊಳ್ಳಲು ಪ್ರಶ್ನೆಗಳನ್ನು ಕೇಳುತ್ತಾ, ಉತ್ತರ ಪಡೆಯುತ್ತಾ ಸಂಭಾಷಣೆ ನಡೆಸುತ್ತಾನೆ.

ಮಾತಿನ ಮಧ್ಯೆ, ನೀ ಹೀಗೇ ಹೇರ್ ಕಟ್ ಮಾಡುತ್ತಿದ್ದಾರೆ, ನನ್ನ ತಲೆಯಲ್ಲಿರುವ ಕೂದಲೆಲ್ಲಾ ಹೋಗಿ, ಬೋಳು ತಲೆಯಾಗಿಬಿಟ್ಟರೆ ಏನು ಮಾಡಲಿ ಎನ್ನುತ್ತದೆ. ಅಳುವ ಮುಖ ಮಾಡಿಕೊಳ್ಳುತ್ತದೆ ಮಗು.

ಹೇರ್ ಕಟ್ ಮಾಡುವಾಗ ಮಗುವಿನ ಚಿತ್ರ-ವಿಚಿತ್ರ ಆಂಗಿಕ ಅಭಿನಯ ನಗು ತರಿಸುತ್ತದೆ. ಕಚಗುಳಿ ಇಟ್ಟಂತಾಗಿ ನಗುವ ಮಗು, ಒಮ್ಮೊಮ್ಮೆ ಅಳುತ್ತದೆ. ಕೋಪ ಮಾಡಿಕೊಳ್ಳುತ್ತದೆ. ಇದನ್ನೆಲ್ಲ ನೋಡಿದವರಿಗೆ ಮುದ್ದು ಮಗುವಿನ ಮೇಲೆ ಪ್ರೀತಿ ಹುಟ್ಟಿಸುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...