ಹೈದ್ರಾಬಾದ್: ಮಹಿಳೆಯೊಬ್ಬರು ತನ್ನ ಅಳಿಯನಿಗಾಗಿ ಭೂರಿ ಭೋಜನ ತಯಾರಿಸಿದ್ದಾರೆ. ಅದು ಅಂತಿಂಥ ಭೋಜನವಲ್ಲ. ಒಟ್ಟು ಐದು ವಿವಿಧ ನಮೂನೆಗಳಲ್ಲಿ 67 ಬಗೆಗಳನ್ನು ಅವರು ಸಿದ್ಧ ಮಾಡಿದ್ದಾರೆ.
ಜೂಸ್ ಮುಂತಾದ ವೆಲ್ ಕಮ್ ಡ್ರಿಂಕ್ಸ್, ಸೂಪ್ ನಂಥ ಸ್ಟಾರ್ಟರ್, ಶೇವು ಪುರಿಯಂಥ ಚಾಟ್ ಮಸಾಲ, ಅನ್ನ ಸಾಂಬಾರು ಹಾಗೂ ಹಲವು ಸಿಹಿ ತಿಂಡಿಗಳನ್ನು ಅವರು ಸಿದ್ಧ ಮಾಡಿದ್ದಾರೆ.
ಮಹಿಳೆ ಆಂಧ್ರ ಶೈಲಿಯ ಈ ಭೋಜನದ ಕುರಿತು ವಿವರಣೆ ನೀಡಿದ 2.12 ನಿಮಿಷದ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ. ಅನಂತ ರೂಪನಗುಡಿ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಜುಲೈ 8ರಂದು ಅಪ್ಲೋಡ್ ಆದ ವಿಡಿಯೋವನ್ನು ಒಟ್ಟು 1.34 ಲಕ್ಷ ಜನ ವೀಕ್ಷಿಸಿದ್ದು, 3.9 ಸಾವಿರ ಜನ ಲೈಕ್ ಮಾಡಿದ್ದಾರೆ. 1.3 ಸಾವಿರ ಜನ ರೀ ಟ್ವೀಟ್ ಮಾಡಿದ್ದಾರೆ.
” ಮುಂದಿನ ಜನುಮದಲ್ಲಿ ನಾನು ನಿಮ್ಮ ಅಳಿಯನಾಗುತ್ತೇನೆ” ಎಂದು ಒಬ್ಬರು ಜೋಕ್ ಮಾಡಿದ್ದಾರೆ. ಇನ್ನೊಬ್ಬರು “ಹುಷಾರು ಮಾರಾಯ ಭೂರಿ ಭೋಜನ ತಿಂದು ಹೊಟ್ಟೆ ಬೆಳೆದೀತು” ಎಂದು ಅಳಿಯನಿಗೆ ಕಿವಿಮಾತು ಹೇಳಿದ್ದಾರೆ. ಮತ್ತೊಬ್ಬರು “ಇದು ಮೊದಲ ವರ್ಷವಿರಬೇಕು ಇದಕ್ಕಾಗಿಯೇ ಅಳಿಯನಿಗೆ ಈ ಉಪಚಾರ, ಮುಂದೆ…..” ಎಂದು ಕಾಲೆಳೆದಿದ್ದಾರೆ.
https://twitter.com/rananth/status/1280784332144013312?ref_src=twsrc%5Etfw%7Ctwcamp%5Etweetembed%7Ctwterm%5E1280784332144013312%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fandhra-woman-cooks-67-item-5-course-meal-for-son-in-law-netizens-ask-how-will-he-do-justice-to-all-that-food%2F618837