alex Certify ಮೊದಲ ರಾತ್ರಿಯೇ ವರನ ಮತ್ತೊಂದು ಮುಖ ಬಹಿರಂಗ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ರಾತ್ರಿಯೇ ವರನ ಮತ್ತೊಂದು ಮುಖ ಬಹಿರಂಗ..!

ಮದುವೆ ಎಂದರೆ ಒಂದು ಹೆಣ್ಣಿಗೆ ತನ್ನದೇ ಆದ ಆಸೆಗಳು, ಕನಸು ಇರುತ್ತವೆ. ಸಾವಿರಾರು ಕನಸುಗಳನ್ನ ಕಂಡ ಹುಡುಗಿ ಅವೆಲ್ಲವೂ ನನಸಾಗಲಿ ಎಂಬ ಹೆಬ್ಬಯಕೆ ಇದ್ದೇ ಇರುತ್ತದೆ. ಅದರಲ್ಲೂ ಫಾರಿನ್ ಹುಡುಗನ ಜೊತೆ ಮದುವೆ ಅಂದರೆ ಕೇಳಬೇಕಾ..? ಕನಸುಗಳ ಪಟ್ಟಿ ಹೆಚ್ಚಾಗಿಯೇ ಇರುತ್ತದೆ. ಹೀಗೆಯೇ ಫಾರಿನ್ ಹುಡುಗನ ಜೊತೆ ಮದುವೆಯಾದ ಹುಡುಗಿಯೊಬ್ಬಳಿಗೆ ಮೊದಲ ರಾತ್ರಿಯಲ್ಲಿಯೇ ವರನ ಮತ್ತೊಂದು ಮುಖ ಬಯಲಾಗಿದೆ.

ಹೌದು, ಆಂಧ್ರಪ್ರದೇಶದ ಗುಂಟೂರಿನಲ್ಲಿ ಅದ್ಧೂರಿ ಮದುವೆಯೊಂದು ನಡೆದಿದೆ. ಸುಬ್ಬಾರೆಡ್ಡಿ ಎಂಬಾತನ ಏಕೈಕ ಪುತ್ರಿಯನ್ನು ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದ ಭಾಸ್ಕರ್ ರೆಡ್ಡಿ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿದೆ. ಹುಡುಗನದೇನೋ ಅಮರರಿಕಾದಲ್ಲಿಯೇ ಕೆಲಸ. ಆದರೆ ಹುಡುಗನೇ ಸರಿ ಇಲ್ಲ ಅಂದರೆ ಹೇಗೆ..? ಕೋಟಿಗಟ್ಟಲೆ ಖರ್ಚು ಮಾಡಿ ಮಗಳ ಮದುವೆಯನ್ನು ಸುಬ್ಬಾರೆಡ್ಡಿ ಮಾಡಿದ್ದಾರೆ. ಮದುವೆಯ ನಂತರ ಮೊದಲ ರಾತ್ರಿಯಲ್ಲಿ ಹುಡುಗ ಆರೋಗ್ಯ ಸರಿಯಿಲ್ಲ ಎಂಬ ನೆಪವೊಡ್ಡಿದ್ದಾನೆ.

ಆದರೆ ಅಸಲಿ ಸತ್ಯ ಎಂದರೆ ಈತ ಸಲಿಂಗಿಯಂತೆ. ಈ ವಿಚಾರ ಮುಚ್ಚಿಟ್ಟ ಭಾಸ್ಕರ್ ರೆಡ್ಡಿ ಕುಟುಂಬ ಆತನಿಗೆ ಮದುವೆ ಮಾಡಿದ್ದಾರೆ. ರಾತ್ರಿಯ ವೇಳೆ ದಿನಕ್ಕೊಂದು ನೆಪ ಹೇಳುತ್ತಿದ್ದ ಭಾಸ್ಕರ್ ರೆಡ್ಡಿಯ ವರ್ತನೆಗೆ ಬಿಂದುಪ್ರಿಯಾ ಬೇಸತ್ತು ಏನು ಸಮಸ್ಯೆ ಎಂದು ಕೇಳಿದಾಗ ಈ ಸತ್ಯ ಬಯಲಾಗಿದೆ. ಅತ್ತ ದುಡ್ಡು ಹೋಯ್ತು, ಇತ್ತ ಮಗಳ ಜೀವನ ಹಾಳಾಯ್ತು ಎಂಬ ಕೊರಗಿನಲ್ಲೇ ಬಿಂದುಪ್ರಿಯಾಳ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...