ಪ್ರೀತಿ ಜಗತ್ತಿನಲ್ಲಿರುವ ಅತ್ಯಂತ ಸುಮಧರ ಭಾವನೆಗಳಲ್ಲೊಂದು. ಪ್ರೀತಿಗೆ ಲಿಂಗ, ಜಾತಿ, ಧರ್ಮ, ವಯಸ್ಸಿನ ಹಂಗಿಲ್ಲ. ಆದರೆ ಭಾರತೀಯ ಸಂಪ್ರದಾಯಬದ್ಧ ಕುಟುಂಬಗಳಲ್ಲಿ ಪ್ರೀತಿಗೆ ಬೇರೇನೆ ಅರ್ಥವಿದೆ. ಬೇರೆ ಜಾತಿ ಹಾಗೂ ರಾಜ್ಯದವರು ಪ್ರೀತಿಯಲ್ಲಿ ಬಿದ್ದರಂತೂ ಕುಟುಂಬಸ್ಥರ ಒಪ್ಪಿಗೆ ಪಡೆಯೋದ್ರೊಳಗೆ ಪ್ರೇಮಿಗಳು ಸುಸ್ತೋ ಸುಸ್ತು..!
ಆಂಧ್ರದ ವಿವೇಕ್ ರಾಜು ಎಂಬ ವ್ಯಕ್ತಿ ಕೂಡ ಇಂತಹದ್ದೇ ಒಂದು ಸಂಕಟದಲ್ಲಿ ಸಿಲುಕಿದ್ರು. ವಿವೇಕ್ ಪಂಜಾಬಿ ಮೂಲದ ಯುವತಿಯನ್ನ ಪ್ರೀತಿಸುತ್ತಿದ್ದರು. ಈ ವಿಚಾರವನ್ನ ಮನೆಯವರಿಗೆ ತಿಳಿಸಿದ್ರು. ವಿಶೇಷ ಅಂದರೆ ತಮ್ಮ ಮನೆಯಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಘಟನೆಯನ್ನೂ ಟ್ವಿಟರ್ನಲ್ಲಿ ಅಪ್ಡೇಟ್ ಮಾಡುತ್ತಿದ್ದರು.
ರಾಜು ನೇರವಾಗಿ ತಮ್ಮ ತಾಯಿಯ ಬಳಿಗೆ ಹೋಗಿ ತಮ್ಮ ಪ್ರೇಮದ ವಿಷಯ ಪ್ರಸ್ತಾಪಿಸಿದ್ದಾರೆ. ತಾಯಿ ಈ ವಿಚಾರದಲ್ಲಿ ಹೆಚ್ಚು ಆಘಾತಕ್ಕೆ ಒಳಗಾಗಿಲ್ಲ. ಆದರೆ ತಂದೆ ಮಾತ್ರ ಮೌನವಾಗಿದ್ದರು. ಅಲ್ಲದೇ ಈ ಸಂಭಾಷಣೆಯಿಂದ ತಪ್ಪಿಸಿಕೊಳ್ಳಬೇಕು ಅಂತಾ ಅವರು ಟಿವಿಯ ಹಿಂದೆ ನಿಂತಿದ್ದರು..!
ಇದಾದ ಬಳಿಕ ರಾಜು ತಂದೆಗೆ ಯುವತಿಯನ್ನ ಭೇಟಿಯಾಗಬೇಕು ಎಂಬ ಹಂಬಲವಿದೆ ಎಂಬ ವಿಚಾರ ರಾಜುಗೆ ತಿಳಿಯಿತು. ಅಲ್ಲದೇ ರಾಜುವಿನ ಈ ನಿರ್ಧಾರದಿಂದ ತಂದೆ ಖುಷಿಯಾಗಿರಲಿಲ್ಲ ಎಂಬ ವಿಚಾರ ತಾಯಿಯಿಂದ ತಿಳಿದುಬಂತು. ನಾನು ಆಕೆ ಕನ್ನಡಿಗರು ಎಂದು ಭಾವಿಸಿದ್ದೆ ಯಾಕೆಂದರೆ ಆಕೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ್ದಳು. ಆದರೆ ಬಳಿಕ ಯುವತಿ ಪಂಜಾಬಿ ಮೂಲದವಳು ಎಂದು ತಿಳಿದುಬಂದಿದೆ.
ಕೆಲ ದಿನಗಳವರೆಗೆ ಈ ಡ್ರಾಮಾ ಹೀಗೆ ಮುಂದುವರೀತು. ತಂದೆ ತಮ್ಮ ಸೈಲೆಂಟ್ ಟ್ರೀಟ್ಮೆಂಟ್ ಮುಂದುವರಿಸಿದ್ರು. ಈ ನಡುವೆ ತಾಯಿ ರಾಜು ಮದುವೆಯ ಕನಸನ್ನ ಕಾಣ್ತಾ ಇದ್ರು. ರಾಜು ಈ ಎಲ್ಲದರ ಬಗ್ಗೆ ಟ್ವಿಟರ್ನಲ್ಲಿ ಹಂತ ಹಂತವಾಗಿ ಮಾಹಿತಿ ನೀಡುತ್ತಲೇ ಇದ್ದರು.
ಕೊನೆಯಲ್ಲಿ ರಾಜು ಈ ಡ್ರಾಮಾ ಇನ್ನೂ ಕೆಲ ದಿನಗಳವರೆಗೆ ಮುಂದುವರಿಯಲಿದೆ. ಇದು ವಾರಗಳ ಕಾಲ ಹೋಗಬಹುದು. ಅಲ್ಲಿಯವರೆಗೆ ಕಾಯುತ್ತಿರಿ ಎಂದು ಟ್ವೀಟ್ ಮಾಡಿದ್ರು. ಆದರೆ ನೆಟ್ಟಿಗರಿಗೆ ಕುತೂಹಲ ತಡೆಯಲು ಸಾಧ್ಯವಾಗಲಿಲ್ಲ. ನೆಟ್ಟಿಗರು ಈ ಕತೆಯನ್ನ ಮುಂದುವರಿಸಿ ಎಂದು ಬೇಡಿಕೆ ಇಡುತ್ತಲೇ ಹೋದರು. ಅನೇಕರು ಆದಷ್ಟು ಬೇಗ ಮದುವೆಗೆ ಕರೆಯಿರಿ ಎಂತಲೂ ಟ್ವೀಟ್ ಮಾಡ್ತಿದ್ದಾರೆ.