ದೇಶದ ರಾಷ್ಟ್ರಧ್ವಜವನ್ನ ವಿನ್ಯಾಸಗೊಳಿಸಿದ ಪಿಂಗಲಿ ವೆಂಕಯ್ಯರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡುವಂತೆ ಆಂಧ್ರ ಪ್ರದೇಶ ಸಿಎಂ ವೈ.ಎಸ್. ಜಗನ್ಮೋಹನ್ ರೆಡ್ಡಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ 75 ವಾರಗಳ ನಡೆಯುವ ಆಜಾದಿ ಕಾ ಮಹೋತ್ಸವ ಕಾರ್ಯಕ್ರಮವನ್ನ ಉದ್ಘಾಟಿಸಿದ ಜಗನ್ ಮೋಹನ್ ರೆಡ್ಡಿ ದಿವಂಗತ ವೆಂಕಯ್ಯರ ಪುತ್ರಿ ಘಂಟಸಾಲಾ ಸೀತಾಮಹಾಲಕ್ಷ್ಮೀಯವರನ್ನ ಸನ್ಮಾನಿಸಿದ್ರು.
ಸಿಎಂ ಜಗನ್ಮೋಹನ್ ರೆಡ್ಡಿ ಸೀತಾಲಕ್ಷ್ಮೀಯವರಿಗೆ 75 ಲಕ್ಷ ರೂಪಾಯಿಗಳನ್ನ ಗೌರವ ಧನ ರೂಪದಲ್ಲಿ ನೀಡಿದ್ರು. ಹಾಗೂ ತ್ರಿವರ್ಣ ಧ್ವಜವನ್ನ ವಿನ್ಯಾಸಗೊಳಿಸಿದ ದಿವಂಗತ ವೆಂಕಯ್ಯರಿಗೆ ಮರಣೋತ್ತರ ಭಾರತ ರತ್ನ ನೀಡಿ ಎಂದು ಪತ್ರದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ರು.
ಕೃಷ್ಣ ಜಿಲ್ಲೆಯ ನಿವಾಸಿಯಾಗಿದ್ದ ಪಿಂಕಲಿ ವೆಂಕಯ್ಯ, ಮಹಾತ್ಮಾ ಗಾಂಧಿ 1921ರ ಏಪ್ರಿಲ್ 1ರಂದು ವಿಜಯವಾಡಕ್ಕೆ ಭೇಟಿ ನೀಡಿದ್ದ ವೇಳೆ ತ್ರಿವರ್ಣ ಧ್ವಜವನ್ನ ನೀಡಿದ್ದರು. 1947ರ ಜುಲೈ 22ರಂದು ಪಿಂಗಲಿ ವೆಂಕಯ್ಯ ವಿನ್ಯಾಸಗೊಳಿಸಿದ ತ್ರಿವರ್ಣ ಧ್ವಜವನ್ನ ರಾಷ್ಟ್ರೀಯ ಧ್ವಜವನ್ನಾಗಿ ಸ್ವೀಕರಿಸಲಾಯ್ತು.