ಮಹೀಂದ್ರಾ ಗ್ರೂಪ್ನ ಚೇರ್ಮೇನ್ ಆನಂದ್ ಮಹೀಂದ್ರಾ ಟ್ವಿಟರ್ನಲ್ಲಿ ಶೇರ್ ಮಾಡೋ ಫೋಟೋಗಳನ್ನ ನೋಡ್ತಿದ್ರೆ ಬಿದ್ದು ಬಿದ್ದು ನಗಬೇಕು ಅನ್ಸುತ್ತೆ. ಯಾವಾಗಲೂ ತಮ್ಮ ತಮಾಷೆಯ ಬುದ್ಧಿಯನ್ನ ಟ್ವಿಟರ್ ಮೂಲಕ ತೋರಿಸೋ ಆನಂದ್ ಮಹೀಂದ್ರಾ ಇದೀಗ ಮತ್ತೊಮ್ಮೆ ತಮ್ಮ ಫಾಲೋವರ್ಸ್ಗೆ ನಗೆಯ ಬಾಡೂಟ ಬಡಿಸಿದ್ದಾರೆ.
100 % ಅಪ್ಪಟ ನಕಲಿ ಅಂಗಡಿ ಎಂಬ ಬೋರ್ಡ್ ಹೊಂದಿರೋ ಅಂಗಡಿಯ ಫೋಟೋವೊಂದನ್ನ ಆನಂದ್ ಮಹೀಂದ್ರ ಶೇರ್ ಮಾಡಿದ್ದಾರೆ. ಒಂದು ವೇಳೆ ನೀವು ಈ ಅಂಗಡಿ ಮಾಲೀಕರಾಗಿದ್ರೆ ಈ ಹೆಸರಿನ ಅಂಗಡಿಯಲ್ಲಿ ಏನನ್ನ ಮಾರಾಟ ಮಾಡ್ತಿದ್ರಿ..? ಅಂತಾ ಪ್ರಶ್ನೆ ಹಾಕಿದ್ದಾರೆ.
ಪಂಜಾಬಿ ವ್ಯಕ್ತಿಯೊಬ್ಬ ದೊಡ್ಡ ತಟ್ಟೆಯಲ್ಲಿ ಒಂದೇ ಒಂದು ದೈತ್ಯಾಕಾರದ ಪರೋಟ ತಿನ್ನುತ್ತಿರುವ ಇನ್ನೊಂದು ಫೋಟೋ ಶೇರ್ ಮಾಡಿದ್ದಾರೆ. ಆಹಾರ ತಜ್ಞರು ನಿಮ್ಮ ಪಂಜಾಬಿ ಉಪಹಾರವನ್ನ ಒಂದು ಪರೋಟಾಗೆ ಸೀಮಿತಗೊಳಿಸಿದ್ರೆ ಈ ಗಾತ್ರದ ಪರೋಟ ತಿನ್ನಿ ಅಂತಾ ಈ ಚಿತ್ರಕ್ಕೆ ಶೀರ್ಷಿಕೆ ನೀಡಲಾಗಿದೆ. ಹಾಗೂ ಆನಂದ್ ಮಹೀಂದ್ರ ಬಸ್ ಏಕ್ ಪೆಹಲ್ವಾನ್ ಪರೋಟ ಅಂತಾ ಕ್ಯಾಪ್ಶನ್ ಬೇರೆ ನೀಡಿದ್ದಾರೆ. ಭಾನುವಾರ ಆನಂದ್ ಮಹೀಂದ್ರ ಈ ಫೋಟೋಗಳನ್ನ ಶೇರ್ ಮಾಡಿದ್ದು ಲಕ್ಷಗಟ್ಟಲೇ ಲೈಕ್ಸ್ ಪಡೆದುಕೊಂಡಿದೆ.