‘ಲಾಕ್ ಡೌನ್’ ಕುಕ್ಕಿಂಗ್ ಬಗ್ಗೆ ಪೋಸ್ಟ್ ಮೂಲಕ ಆನಂದ್ ಮಹೀಂದ್ರಾ ನಗೆಚಟಾಕಿ 29-12-2020 7:02AM IST / No Comments / Posted In: India, Featured News ಕೊರೊನಾ ವೈರಸ್ ಹಾಗೂ ವರ್ಕ್ ಫ್ರಂ ಹೋಂನಿಂದಾಗಿ ಈ ವರ್ಷ ಸಾಕಷ್ಟು ಮಂದಿ ಮನೆಯಲ್ಲೇ ಹೆಚ್ಚು ಸಮಯವನ್ನ ಕಳೆದಿದ್ದಾರೆ. ಕೊರೊನಾ ವೈರಸ್ನಿಂದಾಗಿ ಹೊರಗಡೆ ಆಹಾರ ತಿನ್ನೋಕೆ ಕೊಂಚ ಭಯವಿದ್ದ ಕಾರಣ ಈ ಬಾರಿ ಅನೇಕರು ಗೂಗಲ್ ಹಾಗು ಯುಟ್ಯೂಬ್ ನೆರವಿನಿಂದ ಮನೆಯಲ್ಲೇ ಖಾದ್ಯ ತಯಾರಿ ಮಾಡಿದ್ದೇ ಜಾಸ್ತಿ. ಇನ್ನು ಈ ಬಾರಿ ಅಡುಗೆ ಬಾರದವರೂ ಅಡುಗೆ ಮನೆಯ ಕೆಲಸಕ್ಕೆ ಕೈ ಜೋಡಿಸಿದ ಕುರಿತಾಗಿ ಉದ್ಯಮಿ ಆನಂದ ಮಹೀಂದ್ರಾ ಫನ್ನಿ ಮೀಮ್ಸ್ಗಳನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಈ ಫೋಟೋಗಳನ್ನ ಶೇರ್ ಮಾಡಿದ ಆನಂದ್ ಮಹೀಂದ್ರಾ ಇದು ಡಬ್ಲು ಎಫ್ಟಿಕೆ ಅಂದರೆ ವರ್ಕಿಂಗ್ ಫ್ರಮ್ ದ ಕಿಚನ್ ಎಂದು ಶೀರ್ಷಿಕೆ ನೀಡಿದ್ದಾರೆ . ಅಂದಹಾಗೆ ಆನಂದ ಮಹೀಂದ್ರಾರ ಬ್ರಿಟನ್ನಲ್ಲಿರುವ ಅವರ ಸ್ನೇಹಿತರೊಬ್ಬರು ಈ ಫೋಟೋಗಳನ್ನ ಪೋಸ್ಟ್ ಮಾಡಿದ್ದರಂತೆ. These were posted by a friend in the U.K. But I think they’ll resonate with all those across the world who found that WFH also meant WFTK —working from the Kitchen—and discovered how hopelessly incompetent they were… pic.twitter.com/n7BdRuEdxK — anand mahindra (@anandmahindra) December 27, 2020