74 ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಖ್ಯಾತ ಬ್ಯುಸಿನೆಸ್ ಟೈಕೂನ್ ಆನಂದ್ ಮಹಿಂದ್ರಾ ಅವರಿಗೆ ಹಳೆಯ ವಿಡಿಯೋವೊಂದು ಜೋಶ್ ನೀಡಿದೆ.
ಅರುಣಾಚಲ ಪ್ರದೇಶದ ಬಾಲಕನೊಬ್ಬ ರಾಷ್ಟ್ರಗೀತೆ ಜನಗಣಮನವನ್ನು ಉತ್ಸಾಹದಿಂದ ಹಾಡಿದ ವಿಡಿಯೋವನ್ನು ಮಹಿಂದ್ರಾ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಸುಮಾರು ಮೂರು ವರ್ಷದ ಪುಟ್ಟ ಬಾಲಕ ಸಾವಧಾನ ಸ್ಥಿತಿಯಲ್ಲಿ ನಿಂತು ರಾಷ್ಟ್ರಗೀತೆ ಹಾಡುತ್ತಾನೆ. ಹಲವು ಸಾಲುಗಳನ್ನು ಮರೆಯುತ್ತಾನೆ. ಬಾಲ ಸಹಜವಾಗಿ ತಪ್ಪು ಉಚ್ಛಾರಣೆ ಮಾಡುತ್ತಾನೆ. ಆದರೆ, ಸಾವಧಾನ ಸ್ಥಿತಿಯನ್ನು ಮಾತ್ರ ತಪ್ಪಿಸುವುದಿಲ್ಲ.
“ಕೆಲ ವರ್ಷಗಳ ಹಿಂದೆ ಈ ವಿಡಿಯೋವನ್ನು ನಾನು ನೋಡಿದೆ. ಅದನ್ನು ಸೇವ್ ಮಾಡಿ ಇಟ್ಟುಕೊಂಡಿದ್ದೆ. ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅದನ್ನು ನೋಡಿ ಉತ್ಸಾಹ ತುಂಬಿಕೊಳ್ಳುತ್ತೇನೆ” ಎಂದು ಅವರು ಬರೆದಿದ್ದಾರೆ. “ಅದು ನನ್ನ ಮನದಲ್ಲಿ ರಾಷ್ಟ್ರಗೀತೆಯ ಬಗ್ಗೆ ಉತ್ತಮ ಚಿತ್ರಣ ಮೂಡಿಸುತ್ತದೆ. ಬಾಲಕನ ಮುಗ್ಧತೆ ಹಾಗೂ ಏಕಾಗ್ರತೆ ಯಾವಾಗಲೂ ನನ್ನನ್ನು ಸೆಳೆಯುತ್ತದೆ” ಎಂದು ಮಹಿಂದ್ರಾ ಗ್ರೂಪ್ ನ ಚೇರ್ಮನ್ ಆನಂದ್ ಮಹಿಂದ್ರಾ ಹೇಳಿದ್ದಾರೆ.