
ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಏನಾದರು ಒಂದು ಸುದ್ದಿ ಬಂದರೆ ಭಾರಿ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದಕ್ಕೆ ತಾಜಾ ಉದಾಹರಣೆ ಎನ್ನುವ ರೀತಿಯಲ್ಲಿ ಈ ಸ್ಟೋರಿಯಿದೆ ನೋಡಿ.
ಹೌದು, ಕೆಲ ದಿನಗಳ ಹಿಂದೆ ತಂದೆಯೊಬ್ಬರು ತನ್ನ ಮಗನನ್ನು ಪರೀಕ್ಷೆ ಬರೆಸಲು ಸುಮಾರು 100 ಕಿಮೀ ದೂರ ಸೈಕಲ್‌ನಲ್ಲಿ ಪ್ರಯಾಣಿಸಿದ್ದ ಫೋಟೋ, ವಿಡಿಯೊ ವೈರಲ್ ಆಗಿತ್ತು. ಮಗನ ಶಿಕ್ಷಣಕ್ಕಾಗಿ ಪಡುತ್ತಿರುವ ಶ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಈ ಫೋಟೋ ಮಹೀಂದ್ರ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರ ಅವರ ಕಣ್ಣಿಗೆ ಬಿದ್ದಿದೆ. ತಂದೆಯ ಈ ಶ್ರಮವನ್ನು ಹೊಗಳಿರುವ ಆನಂದ್ ಮಹೀಂದ್ರಾ ಇದೀಗ ವಿದ್ಯಾರ್ಥಿಯ ಶೈಕ್ಷಣಿಕ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದಾರೆ.
ತಮ್ಮ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಯ ಶಿಕ್ಷಣದ ವೆಚ್ಚವನ್ನು ಭರಿಸುವ ಭರವಸೆ ನೀಡಿರುವ ಮಹೀಂದ್ರಾ ಅವರಿಗೆ ಐಪಿಎಸ್ ಅಧಿಕಾರಿ ನವನೀತ್ ಶೇಖರ ಅವರು ಅಭಿನಂದಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ಟೀವ್ ಆಗಿರುವ ಮಹೀಂದ್ರಾ ಅವರ ಈ ಸಮಾಜ ಸೇವೆಯ ನಡೆಯನ್ನು ಅನೇಕರು ಪ್ರಶಂಸಿದ್ದಾರೆ.