
ಆನಂದ್ ಮಹೀಂದ್ರಾರ ಈ ಟಾಸ್ಕ್ಗೆ ನೆಟ್ಟಿಗರು ಕೆಲವೇ ಕ್ಷಣಗಳಲ್ಲಿ ಉತ್ತರವನ್ನ ಹುಡುಕಿದ್ದಾರೆ. ಇದು ಸ್ಪುಟ್ನಿಕ್ 1 ಉಪಗ್ರಹ ಎಂದು ಟ್ವೀಟಿಗರು ಗುರುತಿಸಿದ್ದಾರೆ. ಅಕ್ಟೋಬರ್ 4, 1957ರಲ್ಲಿ ಸೋವಿಯತ್ ಒಕ್ಕೂಟವು ಸ್ಪುಟ್ನಿಕ್ 1ನ್ನು ಭೂಮಿಯ ಮೊದಲ ಕೃತಕ ಉಪಗ್ರಹವಾಗಿ ಉಡಾವಣೆ ಮಾಡಿತು.
ಸ್ಪುಟ್ನಿಕ್ 1, 83 ಕೆಜಿ ತೂಕ ಹಾಗೂ 23 ಇಂಚು ಅಗಲವಾಗಿತ್ತು. ಈಗಿನ ಪ್ರಮುಖ ಉಪಗ್ರಹಗಳಿಗೆ ಹೋಲಿಸಿದ್ರೆ ಇದು ಬಹಳ ಚಿಕ್ಕದಾದ ಉಪಗ್ರಹವಾಗಿದೆ. ಸ್ಪುಟ್ನಿಕ್ ಎಂಬ ಪದ ಕೂಡ ರಷ್ಯಾದಿಂದ ಬಂದ ಪದವಾಗಿದೆ.
ಇದೀಗ ಕೋವಿಡ್ 19 ವಿರುದ್ಧ ಲಸಿಕೆ ಕಂಡುಹಿಡಿದಿರುವ ರಷ್ಯಾ ಇದಕ್ಕೂ ಸ್ಪುಟ್ನಿಕ್ ವಿ ಎಂದು ಹೆಸರಿಟ್ಟಿದೆ. ಏಪ್ರಿಲ್ 1ರಂದು ಕೇಂದ್ರ ಸರ್ಕಾರ ಭಾರತದಲ್ಲಿ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಶೀಘ್ರದಲ್ಲೇ ರಷ್ಯಾದ ಈ ಲಸಿಕೆಯು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಈಗಾಗಲೇ ರಷ್ಯಾದಿಂದ 1,50,000 ಲಸಿಕೆಗಳು ಭಾರತಕ್ಕೆ ಬಂದಿದೆ. ಕೋವಿಡ್ 19 ವಿರುದ್ಧ ಸ್ಪುಟ್ನಿಕ್ ವಿ ಲಸಿಕೆಗಳು 91.6 ಪ್ರತಿಶತ ಪರಿಣಾಮಕಾರತ್ವವನ್ನ ತೋರಿಸಿವೆ.