ಕೆಸರಿನ ಗುಂಡಿಯೊಂದರಲ್ಲಿ ಸಿಲುಕಿದ್ದ ಆನೆಮರಿಯನ್ನು ಜೆಸಿಬಿ ತಂದು ರಕ್ಷಿಸಿದ ವಿಡಿಯೋ ವೈರಲ್ ಆಗಿರುವುದು ನಿಮಗೆ ಗೊತ್ತಿರಬಹುದು. ಈ ವಿಡಿಯೋವನ್ನು ಬಹಳಷ್ಟು ಮಂದಿ ನೆಟ್ಟಿಗರು ಶೇರ್ ಮಾಡಿಕೊಂಡಿದ್ದಾರೆ.
ಉದ್ಯಮಿ ಆನಂದ್ ಮಹಿಂದ್ರಾ ಸಹ ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ಟ್ವಿಟರ್‌ನಲ್ಲಿರುವ ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಘಟನೆಯನ್ನು ಕೋವಿಡ್-19 ಪರಿಸ್ಥಿತಿಯಿಂದ ಹೊರಬರಲು ಹೋರಾಡುತ್ತಿರುವ ಭಾರತಕ್ಕೆ ಹೋಲಿಸಿದ್ದಾರೆ ಆನಂದ್ ಮಹಿಂದ್ರಾ.
‘ಹಿಮೋಗ್ಲೋಬಿನ್’ ಸಮಸ್ಯೆ ದೂರ ಮಾಡುತ್ತೆ ಈ ಆಹಾರ
ಕೆಸರುಗುಂಡಿಯಿಂದ ಹೊರಬರಲು ಆನೆಗೆ ಜೆಸಿಬಿ ಸಹಾಯ ಮಾಡಿದಂತೆ ನಾವೆಲ್ಲರೂ ಪರಸ್ಪರ ಸಹಾಯ ಮಾಡಿಕೊಂಡು ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಿದೆ ಎಂದು ಮಹಿಂದ್ರಾ ಸಮೂಹದ ಚೇರ್ಮನ್ ಈ ಪೋಸ್ಟ್‌ಗೆ ಹಾಕಿರುವ ಕ್ಯಾಪ್ಷನ್‌ನಲ್ಲಿ ಹೇಳಿಕೊಂಡಿದ್ದಾರೆ.
https://twitter.com/anandmahindra/status/1395254140763197441?ref_src=twsrc%5Etfw%7Ctwcamp%5Etweetembed%7Ctwterm%5E1395254140763197441%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fanand-mahindra-shares-viral-elephant-rescue-video-with-india-covid-analogy-viral-tweet-1804829-2021-05-20