
ಕಾಂಗ್ರೆಸ್ ಮುಖಂಡರಾದ ಪ್ರಿಯಾಂಕಾ ವಾದ್ರಾ ಅವರು ವಿಶ್ವ ಪರಿಸರ ದಿನಾಚರಣೆಯಂದು ಬೆರಗುಗೊಳಿಸುವ ವಿಶೇಷ ಛಾಯಾಚಿತ್ರವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಪುತ್ರ ರೆಹಾನ್ ವಾದ್ರಾ ಕ್ಲಿಕ್ಕಿಸಿದ ಅನಿರೀಕ್ಷಿತ ಅತಿಥಿಯ ಫೋಟೋ ಅದಾಗಿತ್ತು. ಹಸಿರಿನ ರಾಶಿಯ ನಡುವೆ ನವಿಲು ನಿಂತಿರುವುದನ್ನು ಚಿತ್ರದಲ್ಲಿ ಕಾಣಬಹುದಾಗಿದೆ. ಫೋಟೋ ಜೊತೆಗೆ ಅವರು ತಮ್ಮ ಅಜ್ಜಿ ಇಂದಿರಾಗಾಂಧಿ ಅವರ ಸಾಲುಗಳನ್ನು ಉಲ್ಲೇಖಿಸಿ ಪ್ರಸ್ತಾಪಿಸಿದ್ದಾರೆ.
ಲಾಕ್ ಡೌನ್ ನಿಂದ ಅನಿರೀಕ್ಷಿತ ವಿಸಿಟರ್, ಭುವಿಯು ಎಲ್ಲರಿಗೂ ಸರಿಸಮಾನ ಎಂಬುದನ್ನು ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಎಲ್ಲರೂ ಅರಿತಿರಬೇಕು ಎಂದು ಎರಡು ಸಾಲು ಫೋಟೋ ಜತೆ ಹಾಕಿದ್ದಾರೆ.