ಅಂಗವೈಕಲ್ಯ ಒಂದು ಶಾಪವಲ್ಲ. ಅದನ್ನು ಮೆಟ್ಟಿ ನಿಂತು ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಹಲವರು ಸಾಕ್ಷಿಯಾಗಿದ್ದಾರೆ. ಈಗ ಅಂಥ ಅಸಾಧ್ಯ ಕೆಲಸ ಮಾಡುವ ವಿಕಲಚೇತನ ವ್ಯಕ್ತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ 15 ಸೆಕೆಂಡ್ ನ ವಿಡಿಯೋವನ್ನು ಅ.5 ರಂದು ಟ್ವೀಟ್ ಮಾಡಿದ್ದಾರೆ. ವಿಡಿಯೋವನ್ನು ಒಂದೇ ದಿನದಲ್ಲಿ 13 ಸಾವಿರ ಜನ ವೀಕ್ಷಿಸಿದ್ದು, 2 ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ.
ಊರುಗೋಲು ಹಿಡಿದು ನಿಂತುಕೊಳ್ಳುವ ಪರಿಸ್ಥಿತಿಯಲ್ಲಿರುವ ವಿಕಲಚೇತನ ವ್ಯಕ್ತಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ವಿಡಿಯೋ ಇಲ್ಲಿದೆ. ಆತ ಗುದ್ದಲಿ ಮೂಲಕ ಮಣ್ಣು, ಜಲ್ಲಿಯನ್ನು ಬುಟ್ಟಿಯಲ್ಲಿ ತುಂಬಿ ಗಾಡಿಗೆ ಹಾಕುತ್ತಾನೆ. ಒಂದು ಕ್ಷಣವೂ ವಿಶ್ರಾಂತಿ ಪಡೆಯದೇ ಆತ ಕೆಲಸ ಮಾಡುವಂತೆ ಕಾಣುತ್ತದೆ. ಸುಶಾಂತ ನಂದಾ ಅವರು “ರೆಸ್ಪೆಕ್ಟ್” ಎಂದಷ್ಟೇ ಕ್ಯಾಪ್ಶನ್ ನೀಡಿದ್ದಾರೆ. “ದೃಢ ಸಂಕಲ್ಪವಿದ್ದರೆ ಏನು ಬೇಕಾದರೂ ಮಾಡಬಹುದು” ಎಂದು ಒಬ್ಬ, “ಕೆಲವರ ಜೀವನ ಎಷ್ಟು ಕಷ್ಟ” ಎಂದು ಇನ್ನೊಬ್ಬ ಟ್ವೀಟ್ ಮಾಡಿದ್ದಾರೆ.
https://twitter.com/AtalPanigrahy/status/1313142649059188736?ref_src=twsrc%5Etfw%7Ctwcamp%5Etweetembed%7Ctwterm%5E1313142649059188736%7Ctwgr%5Eshare_3&ref_url=https%3A%2F%2Fwww.indiatoday.in%2Ftrending-news%2Fstory%2Famputee-man-works-at-construction-site-while-using-a-crutch-viral-video-1728726-2020-10-06